Follow Us On

WhatsApp Group
Focus News
Trending

ಕೋಳಿ ಅಂಕದ ಮೇಲೆ ದಾಳಿ: ಓರ್ವನ ಬಂಧನ: ಇನ್ನೊರ್ವ ಪರಾರಿ

ಅಂಕೋಲಾ: ತಾಲೂಕಿನ ಬಿಳೆಹೊಯಿಗೆ ಗ್ರಾಮದ ಉಪ್ಪಿನ ಆಗರದ ಖಾಲಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕೋಳಿ ಪಡೆ ಮೇಲೆ ದಾಳಿ ನಡೆಸಿದ ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

ಬಿಳಿಹೊಯಿಗಿ ಗ್ರಾಮದ ವಿಠ್ಠಲ ತೋಕು ಹರಿಕಂತ್ರ ಬಂಧಿತ ಆರೋಪಿಯಾಗಿದ್ದು ಮತ್ತೋರ್ವ ಆರೋಪಿ ಮೇಲಿನ ಮಂಜಗುಣಿ ಗ್ರಾಮದ ಮಂಜುನಾಥ ನಾರಾಯಣ ನಾಯ್ಕ ಪರಾರಿಯಾಗಿದ್ದಾನೆ.

ಕೋಳಿ ಪಡೆ ನಡೆಯುತ್ತಿರುವ ಸ್ಥಳದಿಂದ ಎರಡು ಬೈಕುಗಳು, 900 ರೂಪಾಯಿ ನಗದು ಹಣ, ಮೂರು ಕೋಳಿ ಹುಂಜ, ಕೋಳಿ ಕಾಳಗಕ್ಕೆ ಬಳಸುವ 4 ಕತ್ತಿಗಳನ್ನು ವಶಕ್ಕೆ ಪಡೆದುಕೊಂಡ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.

ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿ ಎಸೈ ಪ್ರವೀಣ ಕುಮಾರ ನೇತೃತ್ವದ ತಂಡ ದಾಳಿ ನಡೆಸಿತ್ತು. ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ,ಆಸಿಫ್ ಕುಂಕೂರ, ಹೊನ್ನಪ್ಪ, ವಿಜಯ, ರೋಹಿದಾಸ ದೇವಾಡಿಗ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button