Follow Us On

WhatsApp Group
Important
Trending

ಒಂದೇ ದಿನಕ್ಕೆ ಶತಕದ ಗಡಿದಾಟಿದ ಸೋಂಕು ಪ್ರಕರಣ: ಪುರಸಭೆ ಮುಖ್ಯಾಧಿಕಾರಿ ದೂರಿನ ಹಿನ್ನಲೆ: ಕಾಲೇಜ್ ಪ್ರಾಧ್ಯಾಪಕನ ವಿರುದ್ಧ FIR ?

ಅಂಕೋಲಾ: ತಾಲೂಕಿನಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಅದರಲ್ಲೂ ಮುಖ್ಯವಾಗಿ ಶಾಲಾ – ಕಾಲೇಜು ವಿದ್ಯಾರ್ಥಿಗಳು, ಹಾಸ್ಟೇಲ್ ನಿವಾಸಿಗಳು ಮತ್ತಿತರರೇ ಹೆಚ್ಚಿದ್ದುಸೋಂಕು ನಿಯಂತ್ರಣ, ತಾಲೂಕಾಡಳಿತ – ಆರೋಗ್ಯ ಇಲಾಖೆ ಹಾಗೂ ಸಂಬಧಿತ ಇತರೆ ಇಲಾಖೆಗಳಿಗೆ ಸವಾಲಿನ ಕೆಲಸ ಎನಿಸಿದೆ.

ರವಿವಾರ ಒಂದೇ ದಿನದಲ್ಲಿ ಶತಕದ ಗಡಿ ದಾಟಿದ ಸೊಂಕು ಪ್ರಕರಣಗಳು 114 ಕ್ಕೆ ತಲುಪಿ ಕೆಲವರಲ್ಲಿ ಆತಂಕ ತಂದೊಡ್ಡಿದೆ.. ಈ ಮೂಲಕ ತಾಲೂಕಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 212 ಕ್ಕೆ ಏರಿಕೆಯಾಗಿದೆ.

ಸೋಂಕು ಮುಕ್ತರಾದ 41 ಜನರನ್ನು ಸೋಂಕಿತರ ಯಾದಿಯಿಂದ ಬಿಡುಗಡೆ ಗೊಳಿಸಲಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ 2, ಹೊಂ ಐಸೋಲೇಶನ್ ನಲ್ಲಿ 210 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಿಂದ ಈ ವರೆಗೆ ತಾಲೂಕಿನಲ್ಲಿ ಒಟ್ಟೂ 4241 ಜನರಿಗೆ ಕರೊನಾ ಸೋಂಕು ಲಕ್ಷಣಗಳು ಕಂಡು ಬಂದಿತ್ತು.

ಕೋವಿಡ್ ಕ್ವಾರಂಟೈನ್ ನಿಯಮದ ಉಲ್ಲಂಘನೆಗೆ ಸಂಬಂಧಿಸಿದಂತೆ ತಾಲೂಕಿನ ಗೋಖಲೆ ಸೆಂಟಿನರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಎಸ್. ಆರ್. ಶಿರೋಡ್ಕರ್ ಅವರ ವಿರುದ್ಧ ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಅವರು ಟಪಾಲಿನ ಮೂಲಕ ದೂರೊಂದನ್ನು ದಾಖಲಿಸಿದ್ದಾರೆ.

ಪ್ರೊ. ಶಿರೋಡ್ಕರ್ ಅವರು , ತಮಗೆ ಕರೊನಾ ಸೋಂಕು ದೃಡ ಪಟ್ಟ ನಂತರ 14 ದಿನಗಳ ಕ್ವಾರಂಟೈನ್ ನಲ್ಲಿ ಇರಬೇಕಾದವರು ನಿಯಮ ಉಲ್ಲಂಘಿಸಿ ಜನೆವರಿ 19 ರಂದು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ 13 ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

ಈ ನಡುವೆ ಬದಲಾದ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಕ್ಷಾರಂಟೈನ್ ಅವಧಿ ಕಡಿತ ಗೊಂಡಿದೆ, ಮತ್ತಿತರ ನಿಯಮಾವಳಿಗಳ ಸಡಿಲಿಕೆ ಮಾಡಲಾಗಿದೆ ಎಂಬಿತ್ಯಾದಿ ಅಂಶಗಳ ಕುರಿತು ಪ್ರಕರಣದಲ್ಲಿ ಕೊಂಚ ಗೊಂದಲವಿದೆ ಎಂದು ಕೇಳಿ ಬರುತ್ತಿದ್ದು ಪೊಲೀಸರ ತನಿಖೆಯಿಂದ ,ಸೋಂಕು ಪ್ರಸರಣಕ್ಕೆ ಪ್ರಾಧ್ಯಾಪಕರೇ ಹೊಣೆಯೇ ಎಂಬ ಸತ್ಯಾ ಸತ್ಯತೆ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button