ಅಂಕೋಲಾ: ಭಾರತೀಯ ಚುನಾವಣಾ ಆಯೋಗ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು,ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಧೀಶ ಬಿ ಜೆ ದಿನೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
18 ವರ್ಷ ಮೇಲ್ಪಟ್ಟವರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಲು ಪ್ರೇರಣೆ ಆಗಬೇಕೆಂಬ ಉದ್ದೇಶದಿಂದ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ. ತನ್ನಿಮಿತ್ತ ಅಂಕೋಲದಲ್ಲಿಯೂ ತಹಶೀಲ್ದಾರ ಉದಯ ಕುಂಬಾರ ನೇತೃತ್ವದಲ್ಲಿ ವಿವಿಧ ಇಲಾಖೆ ಹಾಗೂ ಸಂಘಟನೆಗಳ ಸಹಕಾರದಲ್ಲಿ ಸರಳ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.
ಪಟ್ಟಣದ ಕೆ. ಎಲ್. ಇ ಸಭಾಭವನದಲ್ಲಿ ನಡೆದ ಈ ಮಹತ್ವಪೂರ್ಣ ಕಾರ್ಯಕ್ರಮವನ್ನು , ಗಿಡಕ್ಕೆ ನೀರೆರೆಯುವ ಮೂಲಕ ಜೆ. ಎಂ.ಎಫ್.ಸಿ ನ್ಯಾಯಾಧೀಶರಾದ ಬಿ ಜೆ ದಿನೇಶ ಮತ್ತಿತರ ಗಣ್ಯರು ಉದ್ಟಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಸಾಕಾರಗೊಳ್ಳಲಿವೆ. ಮತದಾನದ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಜವಾಬ್ದಾರಿ ಯುವ ಮತದಾರರ ಮೇಲಿದೆ ಎಂದು ಹೇಳಿ ಇತ್ತೀಚಿನ ದಿನಗಳಲ್ಲಿ ಮತದಾನದ ಪಾವಿತ್ರ್ಯತೆ ಕಡಿಮೆ ಆಗುತ್ತಿದೆ ಎನ್ನುವ ಮಾತುಗಳು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು ಪ್ರಜೆಗಳು ತಮ್ಮ ಹಕ್ಕುಗಳನ್ನು ಮರೆಯುತ್ತಿದ್ದಾರೋ ಎಂಬ ಸಂಶಯಗಳಿಗೆ ಕಾರಣವಾಗುತ್ತಿದೆ ಮತಕ್ಕಾಗಿ ನಮ್ಮನ್ನು ಮಾರಾಟ ಮಾಡಿಕೊಂಡರೆ ನಮ್ಮ ಹಕ್ಕುಗಳನ್ನು ಕಳೆದುಕೊಂಡಂತೆ ಎಂಬುದನ್ನು ಮರೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶ ರಂಗಸ್ವಾಮಿ ಮಾತನಾಡಿ ಮತದಾನ ಮಾಡುವುದು ಅರ್ಹತೆ ಹೊಂದಿರುವ ಪ್ರತಿಯೊಬ್ಬ ಪ್ರಜೆಗಳ ಹಕ್ಕು ಯಾರೂ ಸಹ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರತಿ ವರ್ಷ ಮತದಾರರ ದಿನಾಚರಣೆ ಮೂಲಕ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಪಿ ವೈ ಸಾವಂತ್ ಮತದಾನದ ಮಹತ್ವ ತಿಳಿಸಿದರು., ವಕೀಲರ ಸಂಘದ ಅಧ್ಯಕ್ಷ ಸುರೇಶ್ ಬಾನಾವಳಿಕರ ಮತದಾರ ದಿನದ ಶುಭಾಶಯ ಸಲ್ಲಿಸಿದರು. ಮಹಾವಿದ್ಯಾಲಯದ ಕಾಲೇಜಿನ ಪ್ರಾಚಾರ್ಯ ವಿನಾಯಕ ಹೆಗಡೆ ವಂದಿಸಿದರು.
ಈ ಸಂದರ್ಭದಲ್ಲಿ ಮತದಾನದ ಅರ್ಹತೆ ಪಡೆದ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ತಹಶೀಲ್ಧಾರ ಉದಯ ಕುಂಬಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕ ಗಣಪತಿ ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು. ಮತದಾರರ ನೊಂದಣಿಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಬಿ ಎಲ್ ಓ ಗಳಾದ ಉಮೇಶ ಗೌಡ, ವಿದ್ಯಾ ಹೆಗಡೆ, ಮಮತಾ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿರಸ್ತೇದಾರ ಗಿರೀಶ ಜಾಂಬವಳಿಕರ, ನ್ಯಾಯವಾದಿಗಳಾದ ವಿ.ಎಸ್. ನಾಯಕ, ಉಮೇಶ ನಾಯ್ಕ, ಉಪನ್ಯಾಸಕರಾದ ಮಂಜುನಾಥ ಇಟಗಿ, ಡಾ. ಪುಷ್ಪಾ ನಾಯ್ಕ, ಗ್ರಾಮಲೆಕ್ಕಿಗ ಭಾರ್ಗವ ನಾಯಕ, ರಫೀಖ್ ಶೇಖ್,ನಾಗರಾಜ ಸರೂರು, ನಾಯರ್ ಸೇರದಂತೆ ವಿವಿಧ ಮತಗಟ್ಟೆ ಅಧಿಕಾರಿಗಳು ಸಹಕರಿಸಿದರು. ಕೆ. ಎಲ್. ಇ ಪ್ರಶಿಕ್ಷಣಾರ್ಥಿಗಳು,ಕಂದಾಯ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ