Focus News
Trending

ಕೋಟಾ ಶ್ರೀನಿವಾಸ ಪೂಜಾರಿಗೆ ಅಂಕೋಲಾದಲ್ಲಿ ಸ್ವಾಗತ ಕಲಾವಿದರ ಸಂಘದಿಂದ ವಿಶೇಷ ಮನವಿ

ಅಂಕೋಲಾ ಜ 25: ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೂತನವಾಗಿ ನೇಮಕವಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ನಾಳೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ 73 ನೇ ಗಣರಾಜ್ಯೋತ್ಸವ ದ ಧ್ವಜಾರೋಹಣ ನೆರವೆರಿಸಲಿದ್ದಾರೆ.

ಇಂದು ಕುಮಟಾ – ಕಾರವಾರ ಮಾರ್ಗವಾಗಿ ಸಚಿವರು ಕಾರವಾರಕ್ಕೆ ತೆರಳುತ್ತಿದ್ದಾಗ ದಾರಿಮಧ್ಯೆ ಅಂಕೋಲಾದ ಮಹಾಮಾಯ ದೇವಸ್ಥಾನದ ಸ್ವಾಗತ ಕಮಾನಿನ ಎದುರು ರಾ.ಹೆ ಅಂಚಿಗೆ ನಿಂತು ನೂತನ ಉಸ್ತುವಾರಿ ಮಂತ್ರಿಗಳ ಬರುವಿಕೆಗೆ ಕಾದಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಚಿವರ ಕಾರು ಬರುತ್ತಿದ್ದಂತೆ, ಕಾರಿನ ಬಳಿ ತೆರಳಿ, ಹಾರ ಸಮರ್ಪಿಸಿ, ಸ್ವಾಗತಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ, ಅಂಕೋಲಾ ತಾಲೂಕಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಹಿರಿಯ ಮುಖಂಡರಾದ ಭಾಸ್ಕರ ನಾರ್ವೇಕರ್ ಅಂಕೋಲಾ, ಗೋವಿಂದ ನಾಯ್ಕ ಭಟ್ಕಳ, ಅಂಕೋಲಾ ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ, ಸ್ಥಳೀಯ ಪ್ರಮುಖರಾದ ರಾಜೇಂದ್ರ ನಾಯ್ಕ,ಚಂದ್ರಕಾಂತ ನಾಯ್ಕ, ಅನುರಾಧಾ ನಾಯ್ಕ, ಬಾಲಕೃಷ್ಣ ನಾಯ್ಕ, ಸಂದೀಪ ಗಾಂವಕರ್, ಪ್ರವೀಣ ನಾಯ್ಕ, ನಾಗರಾಜ ನಾಯ್ಕ, ಅನಿಲ ಮಹಾಲೆ, ಬೊಮ್ಮಯ್ಯ ನಾಯ್ಕ, ಗಣಪತಿ ನಾಯ್ಕ ಮತ್ತಿತರರು ಸ್ವಾಗತಿಸಿ ಅಭಿನಂದಿಸಿದರು. ಎಲ್ಲರನ್ನು ಅತ್ಮೀಯತೆಯಿಂದ ಮಾತಾಡಿಸಿದ ಸಚಿವ ಪೂಜಾರಿ, ತನ್ನ ಎಂದಿನ ಸರಳ ನಡೆ ನುಡಿ ಮೂಲಕ ಗಮನ ಸೆಳೆದರು.

ಮೊನ್ನೆಯಷ್ಟೇ ಸಚಿವ ಹೆಬ್ಬಾರ ಅವರಿಗೆ ಮನವಿ ನೀಡಿ, ಕಲಾವಿದರು ಮತ್ತು ಅವಲಂಬಿತ ಕುಟುಂಬಗಳ ಪರವಾಗಿ ಅಳಲು ತೋಡಿಕೊಂಡಿದ್ದ ಅಂಕೋಲಾ ತಾಲೂಕು ರಂಗಭೂಮಿ ಕಲಾವಿದರ ವೇದಿಕೆಯ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವಿಶೇಷ ಮನವಿ ಮಾಡಿ, ಜಿಲ್ಲೆಯಲ್ಲಿ ನೈಟ್ ಕರ್ಫ್ಯೂಗೆ ವಿನಾಯತಿ ನೀಡಿ ರಂಗಭೂಮಿ ಚಟುವಟಿಕೆಗಳು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿಕೊಳ್ಳಲಾಯಿತು. ಮನವಿ ಸ್ವೀಕರಿಸಿದ ಸಚಿವರು ಕೋವಿಡ್ ಹಿನ್ನೆಲೆಯಲ್ಲಿ ಸದ್ಯ ರಾತ್ರಿ 11 ಗಂಟೆಯ ವರೆಗೆ ಮಾತ್ರ (ನಿಗದಿತ ಸಮಯದಲ್ಲಿ) ಕಾರ್ಯಕ್ರಮ ನಡೆಸಲು ಅನುಮತಿ ನೀಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು..

ತಾಲೂಕು ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ ಜಾಂಬಳೇಕರ್, ಕಲಾವಿದರುಗಳಾದ ಸುಜೀತ್ ನಾಯ್ಕ, ಧನಂಜಯ ನಾಯ್ಕ, ವಿನಾಯಕ ನಾಯ್ಕ, ಅರವಿಂದ ನಾಯ್ಕ, ಮೋಹನ ನಾಯ್ಕ, ವಿದ್ಯಾಧರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ನಂತರ ಸಚಿವರು ಅಂಕೋಲಾದಿಂದ ಕಾರವಾರಕ್ಕೆ ತೆರಳುವಾಗ ಹಟ್ಟಿಕೇರಿ ಟೋಲ್ ಗೇಟ್ ಬಳಿ ಶಿವಾ ನಾಯ್ಕ ನೇತ್ರತ್ವದಲ್ಲಿ ಸ್ಥಳೀಯ ಪ್ರಮುಖರ ನೇಕರು ಸಚಿವರನ್ನು ಹೂಗುಚ್ಛ ನೀಡಿ ಸ್ವಾಗತಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಗಜು ನಾಯ್ಕ್ ಬಬ್ರುವಾಡ ಮತ್ತಿತರರು ಇದ್ದರು.ಬಳಿಕ ಸಚಿವರು ಕಾರವಾರಕ್ಕೆ ಪ್ರಯಾಣ ಬೆಳೆಸಿದರು. ಇಂದು ಕಾರವಾರದಲ್ಲಿ ತಂಗಲಿರುವ ಸಚಿವರು ನಾಳೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಧ್ವಜಾರೋಹಣ ನಡೆಸಿ,ಗೌರವ ಸ್ವೀಕರಿಸಲಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button