Follow Us On

WhatsApp Group
Important
Trending

ದಂಡಿನದುರ್ಗಾ ದೇವಸ್ಥಾನದ ಮೇಲೆ ಕಲ್ಲುಗಳ ಎಸೆಯುತ್ತಿರುವ ಕಿಡಿಗೇಡಿಗಳು: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಭದ್ರತೆ ನೀಡಿದ ನಗರ ಠಾಣೆ ಪೊಲೀಸರು

ಭಟ್ಕಳ: ಕಿಡಿಗೇಡಿಗಳು ಭಟ್ಕಳ ನಗರದ ಕೋಟೇಶ್ವರ ನಗರದ ಶ್ರೀ ದಂಡಿನ ದುರ್ಗಾ ದೇವಸ್ಥಾನಕ್ಕೆ ಪದೇ ಪದೇ ಹಾನಿ ಹಾಗೂ ಅಪಚಾರಮಾಡುತ್ತಾ ಬಂದಿದ್ದಾರೆ. ಯಾರೋ ಕಿಡಿಗೇಡಿಗಳು ಕಳೆದ 3 ದಿನಗಳಿಂದ ಸಣ್ಣ ಕಲ್ಲುಗಳನ್ನು ಎಸೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ ಕಮಿಟಿ ಮುಖಂಡರು ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಠಾಣೆ ಮೆಟ್ಟಿಲೇರಿದ್ದಾರೆ.

ನಗರಭಾಗದಲ್ಲಿನ ಪ್ರಮುಖ ದೇವಸ್ಥಾನದಲ್ಲಿ ಒಂದಾದ ದಂಡಿನ ದುರ್ಗಾ ದೇವಸ್ಥಾನ,,, ಪದೇ ಪದೇ ಮಲಿನ, ದೇವರ ಡಬ್ಬಿ ಕಳ್ಳತನ ಹೀಗೆ ಅನೇಕ ವಿಚಾರದಲ್ಲಿ ಸುದ್ದಿಯಲ್ಲಿತ್ತು. ಆದರೆ ಈಗ ಅವೆಲ್ಲ ಘಟನೆಗಳನ್ನು ಮೀರಿಸುವಂತೆ ಕಾಶ್ಮೀರದ ದೇವಸ್ಥಾನದ ಮೇಲೆ ಯಾವ ರೀತಿ ಕಲ್ಲು ಎಸೆಯುವ ಘಟನೆ ನಡೆಯುತ್ತಿದ್ದವೋ ಅಂತಹ ದುಸ್ಸಾಹಸಕ್ಕೆ ಕಿಡಿಗೇಡಿಗಳು ಕೈಹಾಕಿದ್ದಾರೆ.

ಜನವರಿ 22 ರಿಂದ 24 ರವರೆಗೆ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರದ್ದಾ ಭಕ್ತಿಯಿಂದ ಭಕ್ತರು ಸಂಭ್ರಮದಿoದ ಆಚರಿಸಿದ್ದರು. ಈ ಪೈಕಿ ಜನವರಿ 23,24 ಹಾಗೂ 25 ರಂದು ಸತತ ಮೂರು ದಿನಗಳ ಕಾಲ ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆಗೆ ದೇವಸ್ಥಾನದ ಎಡಬಾಗದಿಂದ ಸಣ್ಣ ಕಲ್ಲುಗಳನ್ನು ಎಸೆಯಲಾಗಿತ್ತು.

ಈ ವೇಳೆಗೆ ಅಲ್ಲಿದ್ದ ಭಕ್ತರಿಗೆ ಹಾಗೂ ಕಮಿಟಿಯ ಸದಸ್ಯರಿಗೆ ಅಷ್ಟಾಗಿ ಗಮನ ಹರಿಸದೇ ಇದ್ದ ಕಾರಣ ಅಲ್ಲಿಗೆ ಅದು ಮುಗಿತ್ತು. ಆದರೆ ಈಗ ಮತ್ತೆ ದೇವಸ್ಥಾನದ ಹಿಂಬದಿಯ ಚಾವಡಿಗೆ ಕಲ್ಲು ಬಂದು ಬೀಳುತ್ತಿದೆ. ಹಾಗೂ ಕಾರ್ಯಕ್ರಮಕ್ಕೆ ಹಾಕಲಾದ ಶ್ಯಾಮಿಯಾನ ತೆಗೆಯಲು ಬಂದ ವೇಳೆ ಸಣ್ಣ ಕಲ್ಲುಗಳು ದೇವಸ್ಥಾನದ ಚಾವಣಿಯ ಶೀಟ್‌ನ ಮೇಲೆ ಬಿದ್ದಿದ್ದು ಕಮಿಟಿಯ ಸದಸ್ಯರು ನೋಡಿದ್ದಾರೆ. ಈ ಘಟನೆ ಖಂಡನಾರ್ಹ ಎಂದು ಕಮಿಟಿಯ ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ನಾಯ್ಕ ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.

12 ಗಂಟೆಯ ಸುಮಾರಿಗೆ ಸಮಿತಿಯವರು ದೇವಸ್ಥಾನಕ್ಕೆ ಆಗಮಿಸಿ ನೋಡಿದಾಗ 10-12 ಚಿಕ್ಕ ಚಿಕ್ಕ ಕಲ್ಲುಗಳು ಚಾವಡಿ ಮೇಲೆ ಪತ್ತೆಯಾಗಿದೆ. ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ದಿನವಾದ ಭಾನುವಾರ, ಸೋಮವಾರವೂ ಕಲ್ಲುಗಳ ಶಬ್ದವಾಗಿದ್ದು ಕಾರ್ಯಕ್ರಮದ ಗಡಿಬಿಡಿಯಲ್ಲಿ ಗಮನಹರಿಸಲು ಸಾಧ್ಯವಾಗಿಲ್ಲ ಆದರೆ ಇಂದು ಘಟನೆಯು ಕಲ್ಲೆಸೆತದಿಂದಾಗಿ ಶಬ್ದ ಬಂದಿದೆ ಎಂಬುದನ್ನು ಸಮಿತಿಯವರು ದೃಢಪಡಿಸಿದ್ದಾರೆ. ಘಟನೆಯ ಕುರಿತಂತೆ ದೇವಸ್ಥಾನದ ಸಮಿತಿಯ ಸದಸ್ಯರು ವಿಸ್ತೃತವಾಗಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕಳೆದ 22 ವರ್ಷದಿಂದ ಈ ದೇವಸ್ಥಾನದ ಮೇಲೆ ದಾಳಿ, ಮಲಿನಗೊಳಿಸುವುದು ನಿರಂತರವಾಗಿದೆ. ದಂಡಿನದುರ್ಗಾ ದೇವಸ್ಥಾನದಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಕಳ್ಳತನ ನಡೆದಿದ್ದು, ಸಿಸಿಟಿವಿ ಕ್ಯಾಮರದಲ್ಲಿ ವೃಕ್ತಿ ಕೃತ್ಯ ನಡೆಸಿ ವಾಪಸ್ ಹೋಗುತ್ತಿರುವುದು ಕಂಡು ಬಂದಿತ್ತು. ಹಾಗೂ ನಂತರ ಆರೋಪಿಯ ಪತ್ತೆ ಕೆಲಸವನ್ನು ಸಹ ಪೋಲೀಸರು ಮಾಡಿದ್ದರು,. ಈಗ ದೇವಸ್ಥಾನಕ್ಕೆ ದೂರದಿಂದ ಚಿಟ್ ಬಿಲ್ ಬಳಸಿ ಕಲ್ಲು ಎಸೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ದೇವಸ್ಥಾನಕ್ಕೆ ಪೊಲೀಸ್ ಭದ್ರತೆ ನೇಮಿಸಲಾಗಿದ್ದು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಸಮಿತಿಯವರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button