Focus News
Trending

ಶಿಕ್ಷಕ ದಿನಾಚರಣೆ ನಿಮಿತ್ತ 90 ರ ಹಿರಿಯ ಜಿ.ಕೆ.ಗೆ ಗುರುವಂದನೆ

ಅಂಕೋಲಾ: ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಹಲವಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣರಾದ ಹಿರಿಯ ವಿಶ್ರಾಂತ ಶಿಕ್ಷಕ ಜಿ.ಕೆ.ಗಾಂವಕರ್ ಅವರನ್ನು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಕರಬಂಧಿ ನಾಡು ಸೂರ್ವೆಯ ಶಿಷ್ಯವೃಂದದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮನೆಯಂಗಳದಲ್ಲಿ ಶಿಷ್ಯರ ಗೌರವ ಸ್ವೀಕರಿಸಿದ 90 ರ ಹರೆಯದ ಜಿ.ಕೆ.ಗಾಂವಕರ್ ಮಾತನಾಡಿ ತಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಸ್ಥಾನ ಮಾನ ಪಡೆದು ಶ್ರೇಯೋಭಿವೃದ್ದಿ ಹೊಂದಬೇಕು ಎನ್ನುವುದೇ ಪ್ರತಿಯೊಬ್ಬ ಶಿಕ್ಷಕರ ಅಪೇಕ್ಷೆಯಾಗಿರುತ್ತದೆ ಎಂದರು.
ಜಿ.ಕೆ.ಗಾಂವಕರ್ ಅವರ ಧರ್ಮಪತ್ನಿ ನಾಗವೇಣಿ ನಾಯಕ, ಶಿಷ್ಯರುಗಳಾದ ರಾಮಾ ಮಾಸ್ತರ್ ಸೂರ್ವೆ, ಉದಯ ನಾಯಕ, ವಸಂತ ನಾಯಕ ಸೂರ್ವೆ, ಆರ್. ಎಂ.ನಾಯಕ, ಗಣಪತಿ ಟಿ.ನಾಯಕ, ವಿನೋದ ಭಾಸಗೋಡ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button