ಅಂಕೋಲಾ : ಬಾಸಗೋಡ ಊರಿನ ಸ್ವಾತಂತ್ರ್ಯ ಯೋಧ ದಿ. ರಾಮಕೃಷ್ಣ ಪುರ್ಸು ನಾಯಕ ಇವರ ಮಗನಾಗಿದ್ದ, ನೀಲಕಂಠ ರಾಮಕೃಷ್ಣ ನಾಯಕ(78) ಗುರುವಾರ ಬೆಳಿಗಿನ ಜಾವ ಸೃಗೃಹದಲ್ಲಿ ವಿಧಿವಶರಾದರು.
ಉತ್ತಮ ಕೃಷಿಕರಾಗಿ, ಪೊಲೀಸ್ ದಳಪತಿಯಾಗಿ, ಸುಭೋದ ಯಕ್ಷಗಾನ ಮಂಡಳಿಯ ಹೆಸರಾಂತ ಕಲಾವಿದರಾಗಿ, ಸಹಕಾರಿ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ತನ್ನದೇ ಆದ ಹೆಜ್ಜೆ ಮೂಡಿಸಿದ್ದರು. ವ್ಯಾಪಾರ – ವಹಿವಾಟು ನಡೆಸುತ್ತಾ, ನೇರ – ನಿಷ್ಠುರ ನಡೆ ನುಡಿಗಳಿಂದ ಗುರುತಿಸಿಕೊಂಡಿದ್ದರು.ಶ್ರೀ ಕೋಗ್ರೆ ಬೊಮ್ಮಯ್ಯ ದೇವರ ಕಟ್ಟಿಗೆದಾರರಾಗಿ, ಶ್ರೀ ಜೈನರಾಕೇಶ್ವರ ಮತ್ತಿತರ ಪರಿವಾರ ದೇವತೆಗಳ ಪೂಜಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ಮನೆತನದವರಾಗಿದ್ದರು.
ಬಾಸಗೋಡ ಹಾಗೂ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಶೈಕ್ಷಣಿಕ ,ಧಾರ್ಮಿಕ, ಕ್ರೀಡೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಹಾಯ ಸಹಕಾರ ಮಾರ್ಗದರ್ಶನ ನೀಡುತ್ತಿದ್ದರು.ಬಡವ-ಬಲ್ಲಿದರೆನ್ನರೇಜಾತ್ಯಾತೀತವಾಗಿ ಹಲವರ ಮನಗೆದ್ದಿದ್ದರು. ಮೃತರು,ಪತ್ನಿ ಲೀಲಾವತಿ, ಮಕ್ಕಳಾದ ಉದಯ, ಪ್ರಕಾಶ, ದೀಪಕ, ಕಿರಣ, ಗುರುಪ್ರಸಾದ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ತೊರೆದಿದ್ದಾರೆ.
ಮೃತರ ಅಂತ್ಯಕ್ರಿಯೆ ಜನವರಿ 27 ರಂದು ಗುರುವಾರ ಮಧ್ಯಾಹ್ನ 3 ಘಂಟೆ ನಂತರ ಬಾಸಗೋಡಿನಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ