ಓ ಸಿ ಎಜೆಂಟ್ ಬಂಧನ : ಚೋಟಾ ಬುಕ್ಕಿ ನಾಪತ್ತೆ ? ಈಗಲೂ ನಡೆಯುತ್ತಿದೆಯೇ ಆನ್ ಲೈನ್ , ಆಫ್ ಲೈನ್ ನಂಬರ್ ಗೇಮ್ ?
ಕೋಲಾ: ಮಟಕಾ (ಓ ಸಿ ಚೀಟಿ ) ಬರೆಯುತ್ತಿದ್ದ ಆರೋಪದಡಿ ಪೊಲೀಸರು ವ್ಯಕ್ತಿಯೋರ್ವನನ್ನು, ನಗದು ಹಣ ಮತ್ತು ಮಟಕಾ ಬರೆಯುವ ಪರಿಕರಗಳ ಸಮೇತ ವಶಕ್ಕೆ ಪಡೆದಿದ್ದು,ಸ್ಥಳೀಯ ಓ ಸಿ- ಮಟಕಾ ಹಣ ಸಂಗ್ರಹಿಸುವ ಬುಕ್ಕಿ ಎನ್ನಲಾದ ಇನ್ನೋರ್ವ ಆಪಾದಿತ ಪರಾರಿಯಾಗಿದ್ದಾನೆ.
ಗೂಡಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಕೆಳಗಿನ ಮಂಜಗುಣಿಯ ನಾಗಪ್ಪ ತೇಕಪ್ಪ ನಾಯ್ಕ (54)ಬಂಧಿತ ವ್ಯಕ್ತಿ ಯಾಗಿದ್ದು ಈತನಿಂದ ಮಟಕಾ ವ್ಯವಹಾರಕ್ಕೆ ಬಳಸಿದ 1580 ರೂಪಾಯಿ ನಗದು ಮತ್ತು ಓಸಿ ಮಟಕಾ ಜುಗಾರಾಟ ಸಂಖ್ಯೆ ಬರೆದ ಹಾಳೆ, ಖಾಲಿ ಹಾಳೆ, ಪೆನ್ನ ಮತ್ತಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಂಡಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಪಿ. ಎ ಸೈ ಪ್ರವೀಣಕುಮಾರ, ಸಿಬ್ಬಂದಿಗಳಾದ ಆಸಿಫ್ ಕುಂಕೂರ, ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ, ಜಗದೀಶ ನಾಯ್ಕ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಓಸಿ ಬುಕ್ಕಿ ಎನ್ನಲಾದ ಮೇಲಿನ ಮಂಜಗುಣಿಯ ಬೊಮ್ಮಯ್ಯ ನಾರಾಯಣ ನಾಯ್ಕ (40 ) ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪಟ್ಟಣ ವ್ಯಾಪ್ತಿ ಸೇರಿದಂತೆ,ಗ್ರಾಮಾಂತರ ಪ್ರದೇಶದ ಹಲವು ಭಾಗಗಳಲ್ಲಿ ಈಗಲೂ ಆನ್ಲೈನ್ (ಹೈಟೆಕ್ ) , ಆಫ್ ಲೈನ್ ( ಓ ಸಿ ಚೀಟಿ ಬರೆಯುವುದು) ಅಲ್ಲಲ್ಲಿ ಜೋರಾಗಿ ನಡೆಯುತ್ತಿದೆ ಎನ್ನಲಾಗಿದ್ದು,ಪೊಲೀಸ್ ಇಲಾಖೆ ಮತ್ತಷ್ಟು ಚುರುಕುಗೊಂಡು,ಓಸಿ ಮಟ್ಕಾ ದಂಧೆ ನಿಯಂತ್ರಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ