Follow Us On

WhatsApp Group
Important
Trending

Accident: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ: ಮೂವರಿಗೆ ಗಾಯ

ಸಿದ್ದಾಪುರ: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ ( Accident) ಸಂಭವಿಸಿ ಮೂವರು ಸವಾರರಿಗೆ ಗಾಯಗಳಾದ ಘಟನೆ ತಾಲೂಕಿನ ತ್ಯಾಗಲಿ ಸಮೀಪ ನಡೆದಿದೆ. ತ್ಯಾಗಲಿ ಸರ್ಕಾರಿ ಪ್ರಾಥಮಿಕ ಶಾಲಾ ಮುಂದಿನ ರಸ್ತೆಯಲ್ಲಿ ಘಟನೆ ನಡೆದಿದೆ. ಸವಾರರಾದ ಉಮೇಶ್ ಬಂಡಿ ಮಾದರ ( 20 ) ಬಂಕಾಪುರ್, ನಾಗರಾಜ್ ಬಂದೀಯಾ ಮಾದರ ( 25) ಬಂಕಾಪುರ, ಸಲ್ಮಾನ್ ಶಿರಸಿ ಎನ್ನುವವರಿಗೆ ಗಾಯಗಳಾಗಿವೆ. ಉಮೇಶ್, ನಾಗರಾಜ್ ಎನ್ನುವವರಿಗೆ ಚಿಕಿತ್ಸೆಗೆ ಶಿರಸಿ ಪಂಡಿತ್ ಹಾಸ್ಪಿಟಲ್ ನಲ್ಲಿ ದಾಖಲಿಸಿದ್ದು, ಸಲ್ಮಾನ್ ಎನ್ನುವವರಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಕಳುಹಿಸಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button