ಸಿದ್ದಾಪುರ: ಕಾಣೆಯಾದ ಮಗನನ್ನ ಹುಡುಕಿಕೊಡುವಂತೆ ಸಿದ್ದಾಪುರ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಅಣ್ಣಪ್ಪ ಬಸವಣ್ಣೆಪ್ಪ ಹರಿಜನ( 32) ಬನದಕೊಪ್ಪ ನಿಸರಾಣಿ ಸೊರಬ ಕಾಣೆಯಾದ ವ್ಯಕ್ತಿಯಾಗಿದು, ಈತನನ್ನು ಹುಡುಕಿಕೊಡುವಂತೆ ಆತನ ತಾಯಿಯು ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯು ಗೋಧಿ ಮೈಬಣ್ಣ, ಉದ್ದನೆಯ ಮೂಗು, ಸಾಧಾರಣ ಮೈಕಟ್ಟು, ಐದು ಅಡಿ ಎತ್ತರವಿದ್ದು, ಜಾನಕಿ ಎಂದು ಎಡಗೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಮನೆಯಿಂದ ಹೋಗುವಾಗ ಹಳದಿ ಟೀಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾನೆ. ಈತನು ಕಳೆದ ಮೂರು ತಿಂಗಳ ಹಿಂದೆ ತನ್ನ ಹೆಂಡತಿಯ ಮನೆಯಾದ ತಾಲೂಕಿನ ಹೆಗ್ಗೋಡಿನಲ್ಲಿ ಇರುವುದಾಗಿ ಹೋಗಿದ್ದ.
27/10/2021ರಂದು ತನ್ನ ಮನೆಗೆ ಹೋಗುವುದಾಗಿ ಹೇಳಿ ಹೋದವನು ಇದುವರೆಗೂ ಮನೆಗೆ ಬಾರದೆ ಮಾವನ ಮನೆಯಲ್ಲೂ ಇರದೇ ಕಾಣೆಯಾಗಿದ್ದು ಆತನನ್ನ ಹುಡುಕಿಕೊಡುವಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ