Follow Us On

WhatsApp Group
Important
Trending

ಬೈಕ್‌ಗಳ ನಡುವೆ ಅಪಘಾತ: ಮಹಿಳೆ ಸಾವು: ಮೂವರಿಗೆ ಗಾಯ

ಭಟ್ಕಳ: ಬೈಕ್ ಹಾಗೂ ಎಕ್ಟಿವ್ ಹೊಂಡಾ ನಡುವೆ ಡಿಕ್ಕಿಯಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿದೆ. ಅಲ್ಲದೆ, ಈ ಘಟನೆಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದು, ಈ ಘಟನೆ ತಾಲೂಕಿನ ಬೆಂಗ್ರೆ ಸೋಮಯ್ಯನಮನೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ತಾಲೂಕಿನ ಕೈಕಿಣಿ ಗ್ರಾಪಂ ಕೊನಕಾರ ನಿವಾಸಿ ಮಾಸ್ತಿ ಶಂಕರ ದೇವಡಿಗ (48) ಎಂದು ಗುರುತಿಸಲಾಗಿದೆ.

ಎಕ್ಟಿವ್ ಹೊಂಡಾ ಚಲಾಯಿಸುತ್ತಿದ್ದ ಈಕೆಯ ಪತಿ ಶಂಕರ ದೇವಡಿಗ, ಬೈಕ್‌ನಲ್ಲಿದ್ದ ಹೊನ್ನಾವರದ ನಿವಾಸಿಗಳಾದ ಜಸ್ಮಿತ್ ಹಾಗೂ ಜೋತ್ಸಾಗಾಯಗೊಂಡವರಾಗಿದ್ದಾರೆ. ಶಂಕರ ದೇವಾಡಿಗರಿಗೆ ಶಿರಾಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಜಸ್ಮಿತ್ ಹಾಗೂ ಜೋತ್ಸಾರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಎಸ್‌ಐ ರವೀಂದ್ರ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಭಟ್ಕಳ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Back to top button