Follow Us On

WhatsApp Group
Important
Trending

ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ ಶಾರುಖ್ ಖಾನ್ ಲತಾ ಮಂಗೇಶ್ಕರ್ ಶರೀರದ ಮೇಲೆ ಉಗುಳಿದ್ದಾರೆ: ಆರೋಪ ಮಾಡಿರುವ ಸಂಸದ ಅನಂತ್ ಅನಂತ್ ಕುಮಾರ್ ಹೇಳಿದ್ದೇನು? ವೈರಲ್ ವಿಡಿಯೋದ ಅಸಲಿಯತ್ತೇನು?

ಭಾರತರತ್ನ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ ಶಾರುಖ್ ಖಾನ್ ಅಲ್ಲಿ ಮಾಸ್ಕ್ ತೆಗೆದು ದೀದಿ ಮೃತದೇಹದ ಮೇಲೆ ಉಗುಳಿದ್ದಾರೆ ಎಂಬ ಆರೋಪ ಹೊತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಅನಂತ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್ ಖಾನ್ ಗಳ ಮನಸ್ಥಿತಿಯೇ ಹೀಗೆ, ತಮ್ಮ ಅಸಹಜ ನಡವಳಿಕೆಯಿಂದ ದೇಶದ ಗಮನ ತಮ್ಮತ್ತ ಸೆಳೆಯುವುದು, ಪ್ರಚಾರದ ತೆವಲು. ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟಗಳನ್ನು ಮಾಡುವುದು, ರಾಷ್ಟ್ರಧ್ವಜವನ್ನು ಹೊದಿಸಿದ ಗಾನ ಕೋಗಿಲೆ ಲತಾ ಮಂಗೇಶಕರ್ ಅವರ ಶವದ ಮೇಲೆ ಉಗುಳುವುದು, ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಟೀಕಿಸಿದ್ದಾರೆ.

ನಡೆದಿದ್ದೇನು?ಸಾಮಾನ್ಯವಾಗಿ, ಮುಸ್ಲಿಮರು ಕುರಾನ್‌ ಪಾರಾಯಣ ಮತ್ತು ಪ್ರಾರ್ಥಿಸಿದ ಬಳಿಕ ಬಾಯಿಯಿಂದ ಊದುವುದು ಸಹಜ. ಇದನ್ನು ಬಹುತೇಕ ಮುಸ್ಲಿಮರು ಮಾಡುತ್ತಾರೆ. ಅದು ಉಗುಳುತ್ತಿರುವುದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಾಸ್ತವವಾಗಿ, ಶಾರುಖ್ ಖಾನ್ ಅವರು ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ಫತೇಹ್ ಓದಿದರು. ಬಳಿಕ ಮಾಸ್ಕ್ ತೆಗೆದು ಪ್ರಾರ್ಥಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಾರ್ಥನೆಯನ್ನು ‘ಉಗುಳಿದ್ದಾರೆ’ ಎಂದು ಕರೆಯುತ್ತಿದ್ದಾರೆ ಎಂದು ಕೆಲವರು ಸ್ಪಷ್ಟನೆ ನೀಡುತ್ತಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button