Join Our

WhatsApp Group
Important

ಭಟ್ಕಳ ಶ್ರೀ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಪಾಲಕಿ ಮೆರವಣಿಗೆ : ದೇವರ ಆಶೀರ್ವಾದ ಪಡೆದುಕೊಂಡ ಕೋಟಾ ಶ್ರೀ‌ನಿವಾಸ ಪೂಜಾರಿ

ಭಟ್ಕಳ : ಭಟ್ಕಳ ನಾಮಧಾರಿ ಸಮಾಜದ ಶ್ರೀ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಪಾಲಕಿ ಮೆರವಣಿಗೆಯ ಮಾರ್ಗ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀ ನಿವಾಸ ಪೂಜಾರಿ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು.

ಆಸರಕೇರಿ ವೆಂಕಟ್ರಮಣ ದೇವರ ಪುನರ್ ಪತಿಷ್ಠಾಪನ ವರ್ಧಂತಿ ಉತ್ಸವದ ಪ್ರಯುಕ್ತ  ಸಂಜೆ 4 ಗಂಟೆಗೆ ಆರಂಭವಾದ ಪಾಲಕಿ ಮಹೋತ್ಸವ  ದೇವಸ್ಥಾನದಿಂದ ಆರಂಭಗೊಂಡು ಸೋನಾರಕೇರಿ,ಮೂಲಕ ನಗರ ಪೊಲೀಸ ಠಾಣಾ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ ತೆರಳಿ ಮಾರಿಗುಡಿ ದೇವಸ್ಥಾನದಿಂದ ಚೌಥನಿಯ ಕಾಳಿಕಾಂಬಾ ದೇವಸ್ಥಾನ ಸಮೀಪ ತೆರಳಿದ ವೇಳೆ ಅಲ್ಲಿ ಭಕ್ತರು ವಿಶೇಷ ಪೂಜೆಯನ್ನು ಸಲ್ಲಿಸಿದರು.

ಅದೇ ಮಾರ್ಗವಾಗಿ ಮುಂಡಳ್ಳಿಯ ಕುದುರೆ ಬೀರಪ್ಪ ದೇವಸ್ಥಾನದಿಂದ ಪೇಟೆ ಹನುಮಂತ ದೇವಸ್ಥಾನ ಸಮೀಪ ಬರುತ್ತಿದ್ದಂತೆ ಶಾಸಕ ಸುನೀಲ್ ನಾಯ್ಕರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡು ಕಾರವಾರಕ್ಕೆ ತೆರಳಿದರು.

ವಿಸ್ಮಯ‌ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button