Follow Us On

WhatsApp Group
Focus News
Trending

ಒಕ್ಕಲಿಗ ಸಮುದಾಯ ಭವನದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ: ಸನ್ಮಾನ ಕಾರ್ಯಕ್ರಮ

ಯುಗಯೋಗಿ ಪದ್ಮಭೂಷಣ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯಾನುಗ್ರಹದೊಂದಿಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಮಠದ 72ನೇ ಫೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳು ಮತ್ತು ಶಿವಮೊಗ್ಗಾ ಹಾಗೂ ಉತ್ತರ ಕನ್ನಡ ಜಿಲ್ಲೆ ಶಾಖಾ ಮಠದ ಪೂಜ್ಯರಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶಿರ್ವಾದಪೂರ್ಣ ಮಾರ್ಗದರ್ಶನದೊಂದಿಗೆ ಲೋಕಾರ್ಪಣೆಗೊಂಡು ಎರಡು ವರ್ಷ ಪೂರ್ಣ ಗೊಳಿಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭ ದಿನದಂದು ದಿನಾಂಕ 12-02-2022 ರಂದು ಬೆಳಿಗ್ಗೆ ಸಮುದಾಯ ಭವನದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ಸಂಜೆ 5.30 ಶ್ರೀ ಆದಿಚುಂಚನಗಿರಿ ಶಾಖಾಮಠ ಉ.ಕ. ಕುಮಟಾ ಮಿರ್ಜಾನ್ ಇಲ್ಲಿನ ಬೃಹ್ಮಚಾರಿ ಶ್ರೀಗಳಾದ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವ ಸಾನ್ನಿಧ್ಯದಲ್ಲಿ ಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪರಮಪೂಜ್ಯ ಜಗದ್ಗುರುಗಳ ಪಾದೂಕಾ ಪೂಜೆ ಮತ್ತು ಸಮುದಾಯಭವನ ನಿರ್ವಹಣೆ ಮಾಡುವವರಿಗೆ ಸಭಿನಂದನೆ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಜಯಗಳಿಸಿ ಶಿವಮೋಗ್ಗಾ ಮತ್ತು ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರಾದ ಶ್ರೀ ಧಮೇಶ್ ಸಿರಿಬೈಲ್ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಗೌಡ, ತೀರ್ಥಹಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಪ್ರಬಾಕರ ಬಾಳೇಹಳ್ಳಿ, ತೀರ್ಥಹಳ್ಳಿ ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಕ.ರ.ವೇ ಶಿವಮೋಗ್ಗಾ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ಹೆಗಡೆಯವರು, ತೀರ್ಥಹಳ್ಳಿ ಭಾಗದ ಯುವ ಮುಖಂಡರಾದ ಶ್ರೀ ವೆಂಕಟೇಶ ಬಂಡೆಯವರು, ಮಾಜಿ ಶಿಕ್ಷಣ ಮತ್ತು ಸ್ಥಾಯಿ ಸಮೀತಿ ಉ.ಕ. ಜಿಲ್ಲಾಪಂಚಾಯತ ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಜೆ. ಗೌಡ ಮಾವಿನಕುರ್ವಾ, ಕೆಳಿಗಿನೂರು ವಿ.ಎಸ್.ಎಸ್. ಬ್ಯಾಂಕ ಅಧ್ಯಕ್ಷರಾದ ಶ್ರೀ ಗಣಪಯ್ಯ ಕೆ. ಗೌಡ, ಮುಗಳಿ, ವಿಕಾಸ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷರು ಕಾರ್ಮಿಕ ಮುಖಂಡರು ಆದ ಶ್ರೀ ತಿಲಕ ಜೆ. ಗೌಡ, ಮಾವಿನಕುರ್ವಾ, ಒಕ್ಕಲಿಗರ ಯಕ್ಷಗಾನ ಬಳಗದ ಅಧ್ಯಕ್ಷರಾದ ಶ್ರೀ ರಾಮ ಎಸ್. ಗೌಡ, ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಮಂಜು ಜಟ್ಟಿ ಗೌಡ, ಕಳಸಿನಮೋಟೆ, ಕೆಳಗಿನೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಗಂಗಾಧರ ಜಿ. ಗೌಡ, ಮುಗಳಿ, ಜಲವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಗಣೇಶ ಗೌಡ ಪಡುಕುಳಿ, ಖರ್ವಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಭವಾನಿ ಗೌಡ, ಹೊನ್ನಾವರ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್. ಎಚ್. ಗೌಡ ಸಂಘದ ಉಪಾಧ್ಯಕ್ಷರಾದ ಶ್ರೀ ಮಹಾಬಲ ಗೌಡ ಹಕ್ಕಲಕೇರಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ನೆರವೇರಿಸಿಕೊಟ್ಟರು

ತಾಲೂಕಾ ಒಕ್ಕಲಿಗರ ಸಂಘ ರಿ., ಹೊನ್ನಾವರ ಉ.ಕ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ ಶಾಖೆ ಉ.ಕ. ಕುಮಟಾ ಮಿರ್ಜಾನ್ ಇಲ್ಲಿನ ಬ್ರಹ್ಮಚಾರಿ ಶ್ರೀಗಳಾದ ನಿಶ್ಚಲಾನಂದನಾಥ ಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ ಹೊನ್ನಾವರ ಒಕ್ಕಲಿಗರ ಸಮುದಾಯ ಭವನ ಲೋಕಾರ್ಪಣೆಗೊಂಡ ಈ ದಿನದಂದು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುಗಳ ಪಾದೂಕಾ ಪೂಜೆಯನ್ನು ನೆರವೇರಿಸುವ ಮೂಲಕ ವರ್ದಂತಿ ಉತ್ಸವನ್ನು ಆಚರಣೆ ಮಾಡಲಾಗಿದೆ. ದೇವರ ಮತ್ತು ಪೂಜ್ಯ ಆಶೀರ್ವಾದಿಂದ ಸಮಾಜದಲ್ಲಿ ಇನ್ನಷ್ಟು ಒಳ್ಳೊಳ್ಳೊ ಕಾರ್ಯಗಳು ನೆರವೇರಲಿ, ಶ್ರೀ ಮಠ ಮತ್ತು ಪೂಜ್ಯ ಗುರುಗಳ ಆಶೀರ್ವಾದ ಸದಾ ಎಲ್ಲರಮೇಲೂ ಇರಲಿದೆ, ಹೆಚ್ಚೆಚ್ಚು ಸಮಾಜಮುಖಿ ಕಾರ್ಯಗಳು ನೆರವೇರಿ ಸಮಾಜದ ಕಷ್ಟದಲ್ಲಿರುವವರಿಗೆ ಬಡ ವಿಧ್ಯಾರ್ಥಿಗಳಿಗೆ ಸಂಘವು ನೆರವಾಗಲಿ ಎಂದು ಆಶೀರ್ವಚನ ನೀಡಿ ಆಶೀರ್ವದಿಸಿದರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಹೆಚ್ಚಿನ ಮತವನ್ನು ನೀಡುವ ಮೂಲಕ ನನಗೆ ಆಶೀರ್ವದಿಸಿದ ಇಲ್ಲಿನ ಜನರ ರುಣ ನನ್ನಮೇಲಿದೆ, ರಾಜ್ಯ ಒಕ್ಕಲಿಗರ ಸಮಘದಿಂದ ಸಿಗುವ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ನೆರವನ್ನು ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದ ಜರಿಗೆ ತಲುಪಿಸುವ ಮೂಲಕ ನಿಮ್ಮ ಆಯ್ಕೆಯ ರುಣವನ್ನು ತೀರಿಸುವ ಕೆಲಸವನ್ನು ಮುಂದಿನ ದಿಗಳಲ್ಲಿ ಮಾಡುತ್ತೇನೆ. ಪ್ರಥಮಬಾರಿಗೆ ಇಲ್ಲಿಗೆ ಬರುವಾಗ ನಾನು ಎಲ್ಲೋ ಒಂದು ಬಹುದೂರದ ಪ್ರದೇಶಕ್ಕೆ ಹೋಗುತ್ತಿದ್ದೇನೆ ಎನ್ನುವ ಭಾವನೆ ಮೂಡುತಿತ್ತು ಆದರೆ ಈಗ ಹಾಗನ್ನಿಸುವುದಿಲ್ಲ ನಮ್ಮವ ಬಳಿಗೆ ಹೋಗುತ್ತಿದ್ದೇನೆ ಎನ್ನುವ ಭಾವನೆ ಮೂಡುತ್ತಿದೆ. ಹೊನ್ನಾವರ ಒಕ್ಕಲಿಗರ ಸಂಘ ಮತ್ತು ಇಲ್ಲಿನ ಜನ ನನ್ನ ಪರವಾಗಿ ತುಂಬಾ ಕೆಲಸ ಮಾಡಿದ್ದಾರೆ ನನ್ನ ಗೆಲುವಿಗೆ ಸಹಕರಿಸಿದ ಮತ್ತು ಮತ ನೀಡಿದ ಈ ಭಾಗದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ
-ಧರ್ಮೇಶ್ ಸಿರಿಬೈಲ್ನಿ ರ್ದೇಶಕರು ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು

ಸoಘದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ನಿರ್ದೇಶಕ ಲಕ್ಷಿö್ಮÃಕಾಂತ ಗೌಡ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಗೌಡ ರವರು ವಂಧನಾರ್ಪಣೆ ನೆರವೇರಿಸಿಕೊಟ್ಟರು

Back to top button