Follow Us On

WhatsApp Group
Important
Trending

ರಸ್ತೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ 9 ಜನ ಕಾರ್ಮಿಕರಿಗೆ ಗಾಯ

ಅಂಕೋಲಾ : ರಸ್ತೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ವಾಹನ ಪಲ್ಟಿಯಾಗಿ ವಾಹನದಲ್ದಲಿದ್ದ 9 ಜನ ಕಾರ್ಮಿಕ ರಿಗೆ ಗಾಯಗಳಾದ  ಘಟನೆ ತಾಲೂಕಿನ ಆಚವೆ ಗ್ರಾಪಂ ವ್ಯಾಪ್ತಿಯ ವಾಡಗಾರದಲ್ಲಿ ರಾತ್ರಿ ವೇಳೆ ನಡೆದಿದೆ.

ವಾಡಗಾರ ಘಟ್ಟದ ಪ್ರದೇಶದ ರಸ್ತೆಯಲ್ಲಿ ತೆರಳುತ್ತಿರುವಾಗ ಟಾಟಾ 407 ಗಾಡಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ  ಪರಿಣಾಮ ಗಾಡಿಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಗಾಯಾಳುಗಳನ್ನ ಸ್ಥಳೀಯರು ತಮ್ಮ ವಾಹನದಲ್ಲಿ ಅಂಕೋಲಾ  ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತ ನಡೆದ ಸ್ಥಳ ತಾಲೂಕು ಕೇಂದ್ರದಿಂದ ಸುಮಾರು 50 ಕಿಮಿ ದೂರದ ಕಾನನ ಪ್ರದೇಶದಲ್ಲಿದ್ದು, ನೆಟ್ವರ್ಕ್ ಸಮಸ್ಯೆ,ರಸ್ತೆಯ ವಿರಳ ಸಂಚಾರ, ರಾತ್ರಿ ಸಮಯದಲ್ಲಿ ನಡೆದ ಅಪಘಾತ ಮತ್ತಿತರ ಕಾರಣಗಳಿಂದ ಆಂಬುಲೆನ್ಸ್ ಸಂಪರ್ಕ ಸಾಧ್ಯವಾಗಿರಲಿಲ್ಲ ಎನ್ನಲಾಗಿದ್ದು, ತುರ್ತು ಸಂದರ್ಭದಲ್ಲಿ ಸ್ಥಳೀಯರಾದ ಉದಯ ಹೆಗಡೆ ಮತ್ತು ಗಣೇಶ್ ನಾಯ್ಕ ಮಾಬಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು,ಅದಾವುದೋ ಕಾರಣಗಳಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಈ ವರೆಗೂ ಪ್ರಕರಣ ದಾಖಲಾದೇ ,ಗಾಯಾಳುಗಳ ಚೇತರಿಕೆ ಬಳಿಕ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕವಷ್ಟೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button