ತಾಂತ್ರಿಕ ದೋಷ: ಬೋಟ್‌ಗೆ ಮತ್ತೆ ಬೆಂಕಿ: ಅಪಾರ ಹಾನಿ

ಕಾರವಾರ: ಇಲ್ಲಿಯ ಮೀನುಗಾರಿಕೆ ಬಂದರಿನಲ್ಲಿ ತಿಂಗಳ ಹಿಂದೆ ಬೆಂಕಿ ಕಾಣಿಸಿಕೊಂಡು ದುಸ್ಥಿತಿಯಲ್ಲಿದ್ದ ಬೋಟ್‌ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಮಲ್ಪೆಯ ವರದವಿನಾಯಕ ಹೆಸರಿನ ಬೋಟ್ ಇದಾಗಿದ್ದು, ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷ ದಿಂದ ಎಂಜಿನ್‌ನಲ್ಲಿ ಬೆಂಕಿಕಾಣಿಸಿಕೊoಡು ಬೋಟ್ ಸುಟ್ಟು ಕರಕಲಾಗಿತ್ತು.

ಮೀನುಗಾರಿಕೆಗೆ ಬಳಸಲಾರದ ಸ್ಥಿತಿಯಲ್ಲಿದ್ದ ಬೋಟ್ ಅನ್ನು ದಡದ ಮೇಲೆ ತಂದು ನಿಲ್ಲಿಸಿ ಬೋಟ್‌ನ ಬಿಡಿಭಾಗಗಳನ್ನು ಕಳಚಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ವಿಷಯವನ್ನು ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಅಂಕೋಲಾ ಮತ್ತು ಕಾರವಾರದಿಂದ ಬಂದ ಅಗ್ನಿಶಾಮಕ ವಾಹನ ಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವರು. ಸುಮಾರು ಐದಾರು ಗಂಟೆಯ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version