Follow Us On

WhatsApp Group
Important
Trending

ಕನ್ನಡ ವೀಕ್ಷಕರಿಗೆ ಜೀ ಗ್ರೂಪ್‌ ನಿಂದ ಮತ್ತೊಂದು ಕೊಡುಗೆ

ಜೀ ಗ್ರೂಪ್‌ನಿಂದ ದಕ್ಷಿಣ ಭಾರತದಲ್ಲಿ 4 ಡಿಜಿಟಲ್‌ ಪ್ರಾದೇಶಿಕ ನ್ಯೂಸ್‌ ಚಾನೆಲ್‌ ಗಳ ಕಾರ್ಯಾರಂಭ

ಜನವರಿ 25 ರಂದು ಭಾರತದ ಅತಿದೊಡ್ಡ  ನ್ಯೂಸ್‌ ನೆಟ್‌ವರ್ಕ್‌ಗಳಲ್ಲಿ ಒಂದಾದ ಜೀ ಗ್ರೂಪ್‌ ದಕ್ಷಿಣ ಭಾರತದ ಪ್ರಾದೇಶಿಕ ಸುದ್ದಿಗಳಿಗಾಗಿ ಪ್ರತ್ಯೇಕವಾಗಿ 4ಡಿಜಿಟಲ್ ಸುದ್ದಿ ವಾಹಿನಿಗಳನ್ನು ಲಾಂಚ್‌ ಮಾಡಿದೆ. ಜೀ ಕನ್ನಡ ನ್ಯೂಸ್‌, ಜೀ ತಮಿಳು ನ್ಯೂಸ್, ಜೀ ಮಲಯಾಳಂ ನ್ಯೂಸ್, ಜೀ ತೆಲುಗು ನ್ಯೂಸ್.. ಡಿಜಿಟಲ್‌ ನ್ಯೂಸ್‌ ಮೂಲಕ ಜೀ ಗ್ರೂಪ್‌ ಬುದ್ಧಿವಂತ ಯುವ ವೀಕ್ಷಕರ ಅಗತ್ಯಗಳನ್ನು ಪೂರೈಸುತ್ತಿದೆ. ಸುದ್ದಿಯ ಗುಣಮಟ್ಟದ ಬಗ್ಗೆ ವಿಶ್ವಾಸ ಹಾಗೂ ಭರವಸೆಯನ್ನ ಸಂಸ್ಥೆ ಹೊಂದಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ದೇಶದ ಇತರ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ಅತಿ ಹೆಚ್ಚು. 2018 ರಿಂದ 20ರ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನ ವೀಕ್ಷಿಸುವವರ ಸಂಖ್ಯೆ 60 ರಿಂದ 70 ಶೇಕಡಾ ಏರಿಕೆಯಾಗಿದೆ. ಶೇ.85ರಷ್ಟು ಪ್ರಾದೇಶಿಕ ಭಾಷೆಯ ಜನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೀಕ್ಷಣೆ ಮಾಡುತ್ತಿದ್ದಾರೆ. 

ಶೇಕಡಾ 68 ರಷ್ಟು ವೀಕ್ಷಕರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುದ್ದಿ ತಿಳಿಯುತ್ತಿದಾರೆ. ಜೀ ನ್ಯೂಸ್‌ ಯಾವುದೇ ರಾಜಕೀಯ ಪ್ರಭಾವ ಇಲ್ಲದೆ, ಪಕ್ಷಪಾತವಿಲ್ಲದೆ, ನೈಜ ಪರಿಸ್ಥಿತಿಯನ್ನ ವೀಕ್ಷಕರಿಗೆ ತಲುಪಿಸುತ್ತಿದೆ. ಜೀ ಕನ್ನಡ ನ್ಯೂಸ್‌ ವೃತ್ತಿಪರ ಪತ್ರಕರ್ತರ ಪಡೆಯನ್ನ ಹೊಂದಿದೆ. 24*7 ಮಾದರಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ಸದಾ ತಾಜಾ ಸುದ್ದಿಯೊಂದಿಗೆ ವೀಕ್ಷಕರ ಮನ ಗೆಲ್ಲುತಿದೆ. ಹೈಟೆಕ್‌ ಟೆಕ್ನಾಲಾಜಿಯ ಜೊತೆಗೆ ದಕ್ಷತೆಯ ಸಿಬ್ಬಂದಿಯೊಂದಿಗೆ ಜೀ ಕನ್ನಡ ನ್ಯೂಸ್‌ ಸತ್ಯವೇ ಸುದ್ದಿಯ ಜೀವಾಳ ಅನ್ನೋ ಟ್ಯಾಗ್‌ ಲೈನ್‌ ಅಡಿ ಸುದ್ದಿಯನ್ನ ವೀಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಜೀ ಕನ್ನಡ ನ್ಯೂಸ್ ಇಡೀ ರಾಜ್ಯದ ಸಮಗ್ರ ಸುದ್ದಿಗಳನ್ನ ಟಾಪ್‌ 100 ನ್ಯೂಸ್‌ ನಲ್ಲಿ ನೀಡತ್ತೆ. ರಾಜಕೀಯ ಮುಖಂಡರ ವಾಕ್ಜರಿ ನೋಡಲು ಮುಖಾಮುಖಿ ಕಾರ್ಯಕ್ರಮವನ್ನ ಬಿತ್ತರಿಸುತ್ತೆ. ಆ ದಿನದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದಂತ ಸುದ್ದಿಯನ್ನ ವೈರಲ್‌ ಸುದ್ದಿ ಅನ್ನೋ ಅಡಿಬರಹದಲ್ಲಿ ವೀಕ್ಷಕರನ್ನ ತಲುಪುತ್ತೆ. ಸಿನಿ ಪ್ರಿಯರಿಗಾಗಿ ಚಿತ್ರಮಂಜರಿ ಹಾಗೂ ಫ್ಯಾಷನ್‌ ಪ್ರಿಯರಿಗಾಗಿ ಹಾಗೂ ಆರೋಗ್ಯದ ವಿಷಯವಾಗಿ ಚಿತ್ತಾರ ಅನ್ನೋ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಜನರನ್ನ ಜೀ ಕನ್ನಡ ನ್ಯೂಸ್‌ ತಲುಪುತ್ತಿದೆ.
ನಿಮ್ಮ ಜೀ ಕನ್ನಡ ನ್ಯೂಸ್‌ ನೋಡಬೇಕಾದ್ರೆ…

ಕೆಳಗಿನ ಲಿಂಕ್‌ ಗಳನ್ನ ಫಾಲೋ ಮಾಡಿ ಹಾಗೂ ಸಬ್‌ ಸ್ಕ್ರೈಬ್‌ ಮಾಡಿಕೊಳ್ಳಿ
Youtubehttps://www.youtube.com/watch?v=DkihV1nohNw Facebookhttps://www.facebook.com/ZeeKannadaNews/ Twitterhttps://twitter.com/ZeeKannadaNews

Back to top button