Follow Us On

WhatsApp Group
Important
Trending

ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯನಿಗೆ ದ್ರೋಣರತ್ನ ಪ್ರಶಸ್ತಿ: ಎಕ್ಸಲೆಂಟ್ ವರ್ಲ್ಡ್ ರೆಕಾರ್ಡ್  ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನ

ಅಂಕೋಲಾ:ಪಟ್ಟಣದ ಕೆ.ಎಲ್. ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ  ಗಣಪತಿ ಹೆಗಡೆ ಅವರು  ಪ್ರತಿಷ್ಠಿತ ದ್ರೋಣರತ್ನ ಪ್ರಶಸ್ತಿಗೆ ಭಾಜನರಾಗಿದ್ದು,ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯದಲ್ಲಿ ನೊಂದಾಯಿತವಾಗಿದೆ ಎನ್ನಲಾದ ಎಕ್ಸಲೆಂಟ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ( ರಾಷ್ಟ್ರೀಯ ದ್ರೋಣ್ ರತ್ನ ಅವಾರ್ಡ್ 2022)ನ್ನು ಭಾನುವಾರ ಸ್ವೀಕರಿಸಿದರು.

ಉತ್ತರಾಕಾಂಡದ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವರ್ಲ್ಡ್ ರೆಕಾರ್ಡ್ ನ ಸಂಸ್ಥಾಪಕ ಮತ್ತು ನಿರ್ದೇಶಕ ವಿನೋದಕುಮಾರ್ ವರ್ಮಾ, ನಿರ್ದೇಶಕ ಸುರೇಶ ಕಾರಂಜಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಜು ಭಂಡಾರಿ,  ಕುಲಸಚಿವ ಕಪೀಲದೇವ್, ಆರ್ಯ ಭಾರತ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಶಿಹಾನ ಚೌದರಿ, ಸ್ಥಾಪಕ ಅಧ್ಯಕ್ಷರ ಸತೀಶ ಚೌದರಿ ಮೊದಲಾದವರು ಪ್ರಶಸ್ತಿ ಪ್ರದಾನ ಮಾಡಿದರು. ದೇಶದ 28 ರಾಜ್ಯಗಳಿಂದ ನಾನಾ ವಿಭಾಗಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗಿದ್ದು,ಕರ್ನಾಟಕದ ಐವರಲ್ಲಿ ವಿನಾಯಕ ಹೆಗಡೆ ಅವರೂ ಒಬ್ಬರಾಗಿದ್ದಾರೆ.

ಮೂಲತಃ ಹೊನ್ನಾವರದವರಾದ ಹೆಗಡೆ, ಅಂಕೋಲಾದಲ್ಲಿ ಬಹು ವರ್ಷಗಳಿಂದ ನೆಲೆಸಿ ತಮ್ಮ ಬೋಧನಾ ವೃತ್ತಿ ಮತ್ತಿತರ ಹತ್ತಾರು ಸಕ್ರೀಯ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.  ಕೆ.ಎಲ್. ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಬಿ.ಇ.ಡಿ ವಿಭಾಗದ ಅಧ್ಯಕ್ಷ ಜಯಾನಂದ ಮನವಳ್ಳಿ, ಸದಸ್ಯ ಕಾರ್ಯದರ್ಶಿ ಮಹಾದೇವ ಬಳಿಗಾರ, ಸ್ಥಳೀಯ ಕಾರ್ಯದರ್ಶಿ ಡಾ.ದಿನೇಶ ಭಟ್ಕಳ, ಸಂಯೋಜಕ ಆರ್. ನಟರಾಜ, ಸದಸ್ಯೆ ಡಾಮೀನಲ್ ನಾರ್ವೇಕರ್ ಸೇರಿದಂತೆ ಭೋದಕ, ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ವಿನಾಯಕ ಹೆಗಡೆ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದಕ್ಕೆ ಕೆ ಎಲ್ ಇ ಸಮೂಹ ಸಂಸ್ಥೆಗಳ ಪರವಾಗಿ  ಹೆಮ್ಮೆ ಹಾಗೂ ಹರ್ಷ ವ್ಯಕ್ತಪಡಿಸಿದ್ದಾರೆ.                   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button