Follow Us On

WhatsApp Group
Important
Trending

ಎಲ್ಲೆಂದರಲ್ಲಿ ಕಸ ಎಸೆದರೆ ಹುಷಾರ್! ಇಲ್ಲಿದೆ ಸಿಸಿ ಕ್ಯಾಮೆರಾ

ಕುಮಟಾ: ತಾಲೂಕಿನ ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈಲ್ವೇ ಗೇಟ್, ಸಾರಿಂಗ ಬೀರ ದೇವಸ್ಥಾನ ರಸ್ತೆ ಸೇರಿದಂತೆ ಹಲವೆಡೆ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆದು ಪರಿಸರ ಮಾಲಿನ್ಯ ಮಾಡುವ ಕಾರ್ಯ ಮಾಡುತ್ತಿದ್ದರು. ಈ ಬಗ್ಗೆ ವಿಸ್ಮಯ ಟಿ.ವಿ ಯಿಂದಲೂ 3, 4 ಬಾರಿ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ವಿದ್ಯಾವಂತರು, ತಿಳುವಳಿಕೆ ಹೊಂದಿದ ಗ್ರಾಮಸ್ಥರೇ ರಸ್ತೆಯಂಚಿನ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಕಸ ಎಸೆಯುವ ಕೃತ್ಯ ಎಸಗುತ್ತಿದ್ದರು.

ಇದೀಗ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಬೇಕೆಂಬ ಸದುದ್ಧೇಶದಿಂದ ಹೆಗಡೆ ಗ್ರಾಮ ಪಂಚಾಯತ್ ವತಿಯಿಂದ ೪ ಕಡೆಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಗಡೆಯ ರೈಲ್ವೇ ಗೇಟ್ ಸಮೀಪದ ರಸ್ತೆ ಹಾಗೂ ಅಲ್ಲೇ ಪಕ್ಕದಲ್ಲಿರುವ ಸಾರಿಂಗ ಬೀರ ದೇವಾಲಯದ ಸಮೀಪದ ರಸ್ತೆ ಪ್ರದೇಶವು ಕಸ ಎಸೆಯುವ ತಾಣವಾಗಿ ಮಾರ್ಪಾಡಾಗಿತ್ತು. ಇದೀಗ ಸದ್ಯ ರೈಲ್ವೇ ಗೇಟ್ ಸಮೀಪ ೩೬೦ ಡಿಗ್ರಿ ಸಿ.ಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಶೀಘ್ರವೇ ಪಕ್ಕದ ರಸ್ತೆಗು ಕ್ಯಾಮರಾ ಅಳವಡಿಸಲಾಗುವುದು ಎಂದು ಹೆಗಡೆ ಪಿ.ಡಿ.ಒ ತಿಳಿಸಿದ್ದಾರೆ.

ಈ ಸಂಬoದ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಹೆಗಡೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿ.ಎ ಪಟಗಾರ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಹೆಗಡೆ ಗ್ರಾಮ ಪಂಚಾಯತ್‌ದಲ್ಲಿ ಘನ ತ್ಯಾಜ್ಯ ಘಟಕವು ಸುಮಾರು 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದನ್ನು ರಕ್ಷಾ ಸಂಜೀವಿನಿ ಘಟಕ ಎಂಬ ಮಹಿಳಾ ಸಂಘಟನೆಯು ನಿರ್ವಹಿಸುತ್ತಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ವಾರಕ್ಕೆ 2 ಬಾರಿ ಕಸ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಹೀಗಿರುವಾಗಲು ಸಹ ಅನೇಕ ಪ್ರದೇಶಗಳನ್ನು ಎಲ್ಲೆಂದರಲ್ಲಿ ಸಾರ್ವಜನಿಕರು ಕಸವನ್ನು ಎಸೆಯುವ ಕಾರ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಮಾಡಿ, ಸಾಮನ್ಯ ಸಭೆಯಲ್ಲಿ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷರು ಹಾಗೂ ಇನ್ನಿತರ ಸದಸ್ಯರ ನೇತೃತ್ವದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕೆಂಬ ಕುರಿತಾಗಿ ಚರ್ಚೆ ನಡೆಸಿ, ಅದೇ ರೀತಿ ಕ್ಯಾಮರಾವನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿ.ಸಿ ಕ್ಯಾಮರಾ ಅಳವಡಿಸಿದ್ದರಿಂದ ಈ ಸ್ಥಳದಲ್ಲಿ ಯಾರೇ ಕಸ ಎಸೆದರೂ ಕೂಡ ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಅಂತವರನ್ನು ಕರೆಯಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅದೇ ರೀತಿ ಸಾರ್ವಜನಿಕರು ಪರಿಸರವನ್ನು ಕಾಪಾಡುವತ್ತ, ಸ್ವಚ್ಚತೆ ಕಾಪಡುವತ್ತ ಸಹಕರಿಸಬೇಕು ಎಂದು ಕೋರಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button