Follow Us On

WhatsApp Group
Important
Trending

Floating Bridge: ಮುರುಡೇಶ್ವರ ಕಡಲತೀರದ ಆಕರ್ಷಣೆಗೆ ಪ್ಲೋಟಿಂಗ್ ಬ್ರೀಡ್ಜ್ ಹೊಸ ಸೇರ್ಪಡೆ

ಹೆಚ್ಚುತ್ತಲೇ ಇದೆ ಪ್ರವಾಸಿಗರ ದಂಡು

ಮುರ್ಡೇಶ್ವರ: ಉತ್ತರಕನ್ನಡ ಜಿಲ್ಲೆ ಅಂದರೆ ಅದು ಪ್ರವಾಸಿಗರ ಪಾಲಿನ ಸ್ವರ್ಗ ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಗೋಕರ್ಣ,ಯಾಣ, ದಾಂಡೇಲಿ ಹೀಗೆ ಹತ್ತಾರು ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮುಂದೆ ತೆರೆದುಕೊಳ್ಳುತ್ತವೆ. ಅದರಲ್ಲೂ ಮುರುಡೇಶ್ವರ ಕಡಲತೀರದಲ್ಲಿರುವ ಜಲಸಾಹಸ ಕ್ರೀಡೆಯಂತು, ಪ್ರವಾಸಿಗರನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ.ಅದರಲ್ಲೂ ಇದೀಗ ಪ್ಲೋಟಿಂಗ್ ಬ್ರೀಡ್ಜ್ ( Floating Bridge) ಪ್ರವಾಸಿಗರಿಗೆ ಮತ್ತಷ್ಟು ಮಜಾ ನೀಡಲಿದೆ.

ವೀಕ್ ಎಂಡ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಮುರುಡೇಶ್ವರಕ್ಕೆ ಆಗಮಿಸುತ್ತಾರೆ. ಸಾಲು ಸಾಲು…ರಜೆಗಳು ಬಂದರೆ ಸಾಕು ಮಹಾನಗರದಲ್ಲಿ ನೆಲಸಿರೋ ಜನರೆಲ್ಲಾ ನೇರವಾಗಿ ಮೂರುಡೇಶ್ವರಕ್ಕೆ ಆಗಮಿಸಿರುತ್ತಾರೆ. ಈಗಾಗಲೇ ಮೂರುಡೇಶ್ವರದಲ್ಲಿರುವ ನೇತ್ರಾಣಿ ಅಂಡ್ವೇಚರ್ ಸ್ಕೂಬಾ ಡೈವಿಂಗ್ ರಾಜ್ಯದ್ಯದಲ್ಲಿರುವ ಏಕೈಕ ಸ್ಕೂಬ್ ಡೈವಿಂಗ್ ಆಗಿದೆ, ಇದುವರೆಗೆ ಸಾವಿರಾರು ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ನಡುವೇ ಇದೀಗ ಪ್ಲೋಟಿಂಗ್ ಬ್ರೀಡ್ಜ್ ಸೇರ್ಪಡೆಗೊಂಡಿದ್ದು ಇದೂ ಸಹ ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ಲೋಟಿಂಗ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನೂ ಹೆಚ್ಚಿನ ಪ್ರವಾಸಿಗರನ್ನ ಉತ್ತರಕನ್ನಡ ಜಿಲ್ಲೆಯತ್ತ ಸೆಳೆಯಲು ಇದು ಕೂಡ ಅನುಕೂಲಕರವಾಗಲಿದೆ. ಈ ( Floating Bridge) ಪ್ಲೋಟಿಂಗ್ ಬ್ರಿಡ್ಜ್ ನಲ್ಲಿ 130ಮೀ ವರೆಗೂ ಈ ಓಟಾಟ ಮಾಡಬಹುದಾಗಿದೆ. ನೇತ್ರಾಣಿ ಮತ್ತು ಓಶಿಯನ್ ಅಡ್ವೆಂಚರ್ ನಿಂದ ಈ ಪ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದೆ, ಮುರುಡೇಶ್ವರಕ್ಕೆ ಬಂದು ಸ್ಕೂಬಾ ಮಾಡುವುದರ ಜೊತೆಗೆ ಇದೀಗ ಪ್ಲೋಟಿಂಗ್ ಬ್ರಿಡ್ಜ್ ಮೇಲೆ ನಡೆದಾಡೋ ಮೂಲಕ ಪ್ರವಾಸಿಗರು ಏಂಜಾಯ್ ಮಾಡಬಹುದಾಗಿದೆ,

ಏಕಕಾಲದಲ್ಲಿ 150 ಮಂದಿ ಪ್ರವಾಸಿಗರು ಈ ಪ್ಲೋಟಿಂಗ್ ಬ್ರೀಡ್ಜ್ ಮೇಲೆ ಓಡಾಟ ಮಾಡಬಹುದಾಗಿದೆ. ಇದನ್ನ ಮುಂಬೈನ್ ಎಚ್ ಎನ್ ಮರೈನ್ ಕಂಪನಿ ನಿರ್ವಹಣೆ ಮಾಡಿದೆ. ಮೊದಲ ದಿನವೇ ನೂರಾರು ಪ್ರವಾಸಿರು ಈ ಪ್ಲೋಟಿಂಗ್ ಬ್ರಿಡ್ಜ್ ಮೇಲೆ ಓಡಾಟ ಮಾಡುವ ಮೂಲಕ ಏಂಜಾಯ್ ಮಾಡಿದ್ದಾರೆ,ಆರಂಭದ ದಿನದಲ್ಲಿಯೇ ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಮುರುಡೇಶ್ವರ ಕಡಲತೀರದಲ್ಲಿ ಈಗ ಸ್ಕೂಬ್ ಡೈವಿಂಗ್, ಪ್ಲೋಟಿಂಗ್ ಬ್ರಿಡ್ ಮೇಲಿನ ನಡಿಗೆ, ಬೋಟ್ ರೈಡ್,ಜಾರ್ಬಿನ್ ರೋಲ್, ಎಲ್ಲವೂ ಸಹ ಒಳಗೊಂಡಿದ್ದು, ಮತ್ತಷ್ಟು ಪ್ರವಾಸಿಗರನ್ನ ಆಕರ್ಷಿಸುವಂತಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button