Focus News
Trending

ಗಾಂವಕರ ಮೆಮೋರಿಯಲ್ ಪೌಂಡೇಶನಗೆ 11 ರ ಹರುಷ: ಹೊಸ ವರ್ಷದ ಮೊದಲ ದಿನವೇ ಜಿಲ್ಲೆಯ 10 ಯವ ಪ್ರತಿಭೆಗಳಿಗೆ ಪುರಸ್ಕಾರ

ಅಂಕೋಲಾ : ಬಹುಮುಖಿ ವ್ಯಕ್ತಿತ್ವದ ಸ್ವಾತಂತ್ರ್ಯ ಯೋಧ  ಬೊಮ್ಮಯ್ಯ ರಾಕು ಗಾಂವಕರ ಅವರ ಸ್ಮರಣಾರ್ಥ ಅವರ ಕುಟುಂಬದವರು ಆರಂಭಿಸಿರುವ ಗಾಂವಕರ ಮೆಮೋರಿಯಲ್ ಪೌಂಡೇಶನ್ ಬಾಸಗೋಡ II ನೇ ವರ್ಷಕ್ಕೆ ಕಾಲಿಡುತ್ತಿದ್ದು, 2023ರ ಜನವರಿ 1 ರಂದು ಯುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಗಾಂವಕರ ಫೌಂಡೇಶನ್ ಅಧ್ಯಕ್ಷ ದೇವಾನಂದ ಗಾಂವಕರ ಮಾತನಾಡಿ ಕಳೆದ 10 ವರ್ಷಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನಾನಾ ಸಮುದಾಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ 92 ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಗಿದ್ದು ಈ ಬಾರಿಯೂ ಜಿಲ್ಲೆಯ ನಾನಾ ತಾಲೂಕುಗಳಿಂದ ಚಿತ್ರಕಲೆ, ಶಿಕ್ಷಣ, ಸೃಜನಶೀಲತೆ, ಕಲೆ, ಕ್ರೀಡೆ,ಅರಣ್ಯ, ವೈದ್ಯಕೀಯ, ಶಿಕ್ಷಣ, ಸಂಶೋಧನೆ, ವಾಯು ಸೇನೆ ಸೇರಿದಂತೆ ನಾನಾ ಕ್ಷೇತ್ರದ ಯುವ ಪ್ರತಿಭೆಗಳಿಗೆ ಪುರಸ್ಕರಿಸಲಾಗುತ್ತಿದೆ.

ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿಯಾದ ಕಳ್ಳ| ನಡೆದುಕೊಂಡೇ ಬಂದು ಕುತ್ತಿಗೆಯಲ್ಲಿ ಚಿನ್ನಸರ ಎಗರಿಸಿದ ಅಪರಿಚಿತ

ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಟನೆಲ್ ಮ್ಯಾನ್ ಖ್ಯಾತಿಯ ಅಮೈ ಮಹಾಲಿಂಗ ನಾಯ್ಕ ಉದ್ಘಾಟಿಸಲಿದ್ದು, ಜಿಲ್ಲೆಯ ಹಿರಿಯ ಪತ್ರಿಕಾ ಸಂಪಾದಕ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಿಟಿಷ್ ಸರಕಾರದ ಆಳ್ವಿಕೆಯ ಉತ್ತಮ ಆಡಳಿತಗಾರರಾಗಿ ಕಲೆಕ್ಟರ್ ಎಂದೇ ಪ್ರಸಿಧ್ಧಿಯಾಗಿದ್ದ ಗೊನೆಹಳ್ಳಿ ವೆಂಕಣ್ಣ ನಾಯಕ ಕುರಿತು ಖ್ಯಾತ ಯಕ್ಷಗಾನ ಕಲಾವಿದೆ ಹಾಗೂ ಸಹ ಪ್ರಾಧ್ಯಾಪಿಕೆಯಾದ ಡಾ. ಪ್ರಜ್ಞಾ ಮತ್ತಿಹಳ್ಳಿ ಉಪನ್ಯಾಸ ನೀಡಲಿದ್ದಾರೆ. ಅಮೇರಿಕದ ಮೈಕ್ರೋಲ್ಯಾಂಡ್ ನಲ್ಲಿ ಚೀಪ್ ಡೆಲಿವರಿ ಆಫೀಸರ್ ಆಗಿರುವ ಮಂಜಿನಾಥ ನಾಯಕ ಅವರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಗುತ್ತಿದ್ದು, ವಿವಿಧ ಪ್ರತಿಭೆಗಳಿಂದ ಯಕ್ಷ ನೃತ್ಯ, ಗಾಯನ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದ್ದು ಸರ್ವರೂ ಬಂದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.

ಸಂಘಟನೆಯ ಪ್ರಮುಖರಾದ ಕವಯತ್ರಿ ಅಕ್ಷತಾ ಕೃಷ್ಣ ಮೂರ್ತಿ ಮಾತನಾಡಿ, ಜನವರಿ 1 ರ ರವಿವಾರ ಸಂಜೆ ಸ್ವಾತಂತ್ರ್ಯ ಸಂಗ್ರಾಮ ಭವನದ ಸಾಧನಾ ವೇದಿಕೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಹಲವು ವಿಶೇಷ ತೆಗಳೊಂದಿಗೆ ಕುಡಿರಲಿದ್ದು , ದೀಪ ಜ್ಯೋತಿ ಬೆಳಗುವಾಗಲೂ ಪುರಾತನ ಹಾಗೂ ಜನಪದ ವಸ್ತು ಮತ್ತಿತರ ಸಂಸ್ಕೃತಿ ಪ್ರತಿಬಿಂಬಿಸುವ ಯತ್ನ ಮಾಡುಗುತ್ತಾ ಬರಲಾಗಿದೆ. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ತನ್ನ ಜೀವದ ಹಂಗು ತೊರೆದು ಕಡು ಬಡತನದ ನಡುವೆಯೂ ವಿಶೇಷ ತ್ಯಾಗ ಹಾಗೂ ಸೇವೆ ಸಲ್ಲಿಸಿ ಹೋರಾಟಗಾರರಿಗೆ ಆಸರೆಯಾಗಿ ಸ್ವಾತಂತ್ರ್ಯ ಚರಿತ್ರೆಯಲ್ಲಿ ತನ್ನನ್ನು ಗುರುತಿಸಿಕೊಂಡು ಅಮರಳಾದ ಸಿದ್ಧಾಪುರದ ದಲಿತ ಮಹಿಳೆ ಹಲಸರ ದೇವಿಯನ್ನು ಗೌರವಪೂರ್ವಕವಾಗಿ ಸ್ಮರಿಸಿಕೊಳ್ಳುವ ಸುದಿನವೂ ಇದಾಗಿದೆ ಎಂದರು.

ಸಂಘಟನೆಯ ಕಾರ್ಯಧ್ಯಕ್ಷ ವಿ. ಎಸ್. ನಾಯಕ ಬೆಡಸಗಾಂವ ಮಾತನಾಡಿ,ಹಿರಿಯ ಚೇತನ ಬೊಮ್ಮಯ್ಯ ಗಾಂವಕರ  ನಮ್ಮ ಕುಟುಂಬದ ಹೆಮೈಯಾಗಿದ್ದು ನಾವೆಲ್ಲರೂ ಒಂದಾಗಿ ಈ ಸಂಘಟನೆ ಮೂಲಕ ಹಿರಿಯರಿಗೆ  ಗೌರವ ಸಲ್ಲಿಸುತ್ತಿದ್ದೇವೆ ಎಂದರು. ಗೌರವಾಧ್ಯಕ್ಷ ಗೋವಿಂದರಾಯ ನಾಯಕ, ಗೌರವ ಕಾರ್ಯದರ್ಶಿ ರಘುವೀರ ಗಾಂವಕರ, ಸಂಘಟನೆಯ ಪ್ರಮುಖ ಗೌರೀಶ ನಾಯಕ ಉಪಸ್ಥಿತರಿದ್ದರು. ಗೋಪಾಲ ಆರ್ ನಾಯಕ ಬಾಸಗೋಡ ವಂದಿಸಿದರು. ಗಾಂವಕರ ಕುಟುಂಬ ಸದಸ್ಯರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button