ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದು ಪರಾರಿಯಾದ ಕಳ್ಳ| ನಡೆದುಕೊಂಡೇ ಬಂದು ಕುತ್ತಿಗೆಯಲ್ಲಿ ಚಿನ್ನಸರ ಎಗರಿಸಿದ ಅಪರಿಚಿತ

ಹೊನ್ನಾವರ: ಅವರೆಲ್ಲ‌ ಮದುವೆಗೆ ಬಂದಿದ್ದರು. ಆದರೆ ಮದುವೆ ಮುಗಿಸಿ ವಾಪಸ್ ಆಗುವ ವೇಳೆ ಆಗಿದ್ದೆ ಬೇರೆ. ಹೌದು, ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ಅಪರಿಚಿತ ವ್ಯಕ್ತಿ ಎಗರಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಚಂದಾವರ ಹನುಮಂತ ದೇವಸ್ಥಾನದ ಬಳಿ ನಡೆದಿದೆ.

ನಿದ್ರೆಗೆ ಜಾರಿದ ಚಾಲಕ: ಏಕಾಏಕಿ ಅಂಗಡಿಗೆ ನುಗ್ಗಿದ ಲಾರಿ

ಮಹಿಳೆಯೊಬ್ಬಳು ಮದುವೆ ಮುಗಿಸಿ ವಾಪಸ್ಸಾಗಲು ಟೆಂಪೋಗೆ ಕಾಯುತ್ತಿದ್ದ ವೇಳೆ ಏಕಾಏಕಿ ಅಪರಿಚಿತ ನಡೆದು ಬಂದು ಏಕಾಏಕಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾನೆ. ಮಾಂಗಲ್ಯ ಮಾತ್ರವಲ್ಲದೆ ಚೈನ್ ಗೂ ಕೈಹಾಕಿದ್ದು, ಆದರೆ ಚೈನ್ ತುಂಡಾಗಿ ನೆಲಕ್ಕೆ ಬಿದ್ದಿದ್ದರಿಂದ ಅದನ್ನು ಎತ್ತಿಕೊಳ್ಳಲು ಹೆದರಿ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಮಹಿಳೆ ಕಂಗಾಲಾಗಿದ್ದಾರೆ. ಹೊನ್ನಾವರದ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಸರ ಕಳೆದುಕೊಂಡವರು ಎಂದು ತಿಳಿದುಬಂದಿದೆ. ಇವರು ಸಂಬಂಧಿಕರ ಮದುವೆಗೆಂದು ಚಂದಾವರಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version