Focus News
Trending

ಅಂಕೋಲಾದಲ್ಲಿ ಗುರುವಂದನಾ ಕಾರ್ಯಕ್ರಮ

ಅಂಕೋಲಾ: ಕೆ. ಎಲ್. ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾದಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ಯೋಗ ಒಂದು ಚಿಕಿತ್ಸಕ ಪದ್ಧತಿ ಅಷ್ಟೇ ಅಲ್ಲದೆ ಅದೊಂದು ಜೀವನ ಪದ್ಧತಿಯಾಗಿದೆ ಎಂದು ಪತಂಜಲಿ ಯೋಗ ಸಮಿತಿ ತಾಲೂಕಾ ಪ್ರಭಾರಿ ಮತ್ತು ಯೋಗ ಗುರುಗಳಾದ ವಿನಾಯಕ ಗುಡಿಗಾರ ಹೇಳಿದರು.

ಯೋಗಕ್ಕೆ ಒಂದು ಪರಂಪರೆ ಇದ್ದು ಅದರಲ್ಲಿ ವಿಜ್ಞಾನವು ಇದೆ ಕೆಲವರಿಗೆ ಯೋಗದ ಕುರಿತು ತಪ್ಪು ಕಲ್ಪನೆ ಇದ್ದು ಯೋಗಕ್ಕೆ ಜಾತಿ, ಧರ್ಮ ಅಥವಾ ವಯಸ್ಸಿನ ನಿರ್ಬಂಧವಿಲ್ಲ.ಅಲ್ಲದೆ ಇದು ಕೇವಲ ವ್ಯಾಯಾಮವೂ ಅಲ್ಲ ಇದನ್ನು ಸರಿಯಾಗಿ ಪಾಲಿಸಿದಲ್ಲಿ ಮಾತ್ರ ಯೋಗ ಕಲಿಸಿದ ಶಿಕ್ಷಕರಿಗೆ ಗೌರವ ನೀಡಿದಂತಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ ಅಂಕೋಲಾದ ಪ್ರಭಾರಿಗಳಾದ ವಿನಾಯಕ ಗುಡಿಗಾರ ಹೇಳಿದರು.

ಕೆ.ಎಲ್. ಇ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿಸಲಾಗಿದ್ದ ಯೋಗ ಪಾಕ್ಷಿಕ ಕಾರ್ಯಕ್ರಮದ ಸಮಾರೋಪ ಹಾಗೂ ಗುರು ಗೌರವ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕನು ತನ್ನ ವಿದ್ಯಾರ್ಥಿಗಳಲ್ಲಿ ಆಗುವ ಬದಲಾವಣೆಯನ್ನು ಅವಲೋಕಿಸುವ ಗುಣ ಹೊಂದಿರಬೇಕೆಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ವಿನಾಯಕ ಜಿ ಹೆಗಡೆ ಯೋಗ ಮನಸ್ಸಿನ ಮೂಲೆಯಲ್ಲಿರುವ ಚಿಂತನೆಯನ್ನು ದೂರಮಾಡಿ ಸಮೃದ್ಧ ಶಾಂತಿಯುತ ಮನಸ್ಸನ್ನು ಸೃಷ್ಟಿಸುತ್ತದೆ.ಯೋಗವನ್ನು ಪ್ರತಿನಿತ್ಯ ಯಜ್ಞದಂತೆ ಮಾಡಬೇಕು ಎಂದರು.

ಕುಮಾರಿ ಸುಷ್ಮಾ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಕಾವ್ಯ ಗಾಂವಕರ ಸ್ವಾಗತಿಸಿದರು.ಯೋಗ ಪಾಕ್ಷಿಕದ ಕುರಿತು ವಿದ್ಯಾರ್ಥಿಗಳಾದ ಚೈತ್ರ ಆಚಾರಿ ಹಾಗೂ ಹರ್ಷ ಎಂ.ಎಚ್ ಮಾತನಾಡಿದರು. ಕುಮಾರಿ ವೀಣಾ ಗೌಡ ವಂದಿಸಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ರಾಘವೇಂದ್ರ ಅಂಕೊಲೇಕರ ಉಪಸ್ಥಿತರಿದ್ದರು. ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button