Follow Us On

WhatsApp Group
Important
Trending

ಊಟ ಮಾಡಿ ಮಲಗಿದ್ದ ವೃದ್ಧೆಯ ಮೇಲೆ ಕುಸಿದುಬಿದ್ದ ಮನೆ: ಸಿನಿಮೀಯ ರೀತಿಯಲ್ಲಿ ಅಪಾಯದಿಂದ ಪಾರಾದ ಮಹಿಳೆ

ಅಕ್ಕಪಕ್ಕದ ಮನೆಯವರಿಂದ ವೃದ್ಧೆಯ ರಕ್ಷಣೆ

ಶಿರಸಿ: ಮನೆಯೊಂದು ಏಕಾಏಕಿ ಕುಸಿದುಬಿದ್ದಿದ್ದು, ಈ ವೇಳೆ ಮನೆಯಲ್ಲಿದ್ದ ವೃದ್ಧೆ ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಇಲ್ಲಿಯ ಖಾಜಿಗಲ್ಲಿಯಲ್ಲಿ ನಡೆದಿದೆ. ಹೌದು, ಮನೆಯೊಂದು ದಿಢೀರ್ ಆಗಿ ಕುಸಿದುಬಿದ್ದಿದ್ದು, ಮನೆಯಲ್ಲಿದ್ದ ವೃದ್ಧೆಯೊಬ್ಬರು ಹೆಂಚು- ಪಕಾಸು, ಗೋಡೆ ಕಲ್ಲಿನ ಅಡಿಯಲ್ಲಿ ಸಿಲುಕಿದ್ದರು. ಆದರೂ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ರೋಡ್ ಕ್ರಾಸ್ ಮಾಡುವ ವೇಳೆ ಹಿಂಬದಿಯಿಂದ ಡಿಕ್ಕಿಹೊಡೆದ ಕಾರು: ಬೈಕ್ ಸವಾರ ಸ್ಥಳದಲ್ಲೇ ಸಾವು

ಪಾರಾದವರಾಗಿದ್ದಾರೆ. ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದ ವೃದ್ಧೆ ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆ ಏಕಾಎಕಿ ಕುಸಿದು ಬಿದ್ದಿದೆ, ವೃದ್ಧೆಯು ಮನೆಯ ಅಡಿಯಲ್ಲಿ ಸಿಲುಕಿದ್ದು, ಅಕ್ಕಪಕ್ಕದ ಜನರು ವೃದ್ಧೆಯನ್ನು ರಕ್ಷಿಸಿ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೃದ್ಧೆ ಅಪಾಯದಿಂದ ಪಾರಾಗಿದ್ದಾರೆ. ಗೋಡೆ ಬಿದ್ದಿದ್ದರಿಂದ ಮನೆಯ ಹೊರಗಡೆ ಇಡಲಾಗಿದ್ದ ಎರಡು ಬೈಕ್‌ಗಳು ಖಜಂಗೊoಡಿವೆ.

ವಿಸ್ಮಯ ನ್ಯೂಸ್, ಶಿರಸಿ

Back to top button