ರೋಡ್ ಕ್ರಾಸ್ ಮಾಡುವ ವೇಳೆ ಹಿಂಬದಿಯಿಂದ ಡಿಕ್ಕಿಹೊಡೆದ ಕಾರು: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕಿನ ಹಿಂಬದಿ ಕುಳಿತಿದ್ದ ವಿದ್ಯಾರ್ಥಿಗೆ ಗಂಭೀರ ಗಾಯ

ಕಾರವಾರ: ರೋಡ್ ಕ್ರಾಸ್ ಮಾಡುವ ವೇಳೆ ಬೈಕಿನ ಹಿಂಭಾಗಕ್ಕೆ ಕಾರೊಂದು ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಬಿಗಣಾದಲ್ಲಿ ನಡೆದಿದೆ. ಬಾಡದ ಪಾದ್ರಿಭಾಗದ ನಿವಾಸಿ ಇಜಾಕ್ ಲೂಯಿಸ್ ಫರ್ನಾಂಡೀಸ್ ಮೃತಪಟ್ಟ ಸವಾರ. ಈತ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೂರಿಸಿಕೊಂಡು ಅಂಕೋಲಾ ಕಡೆಗೆ ತೆರಳುತ್ತಿದ್ದಾಗ , ರೋಡ್ ಕ್ರಾಸ್ ಮಾಡುವ ವೇಳೆ, ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಅಮೃತ ಮಹೋತ್ಸವ, ಹಬ್ಬಗಳ ಸಂಭ್ರಮದ ಮಧ್ಯೆಯೇ ಸದ್ದಿಲ್ಲದೆ ಏರಿಕೆಯಾಗುತ್ತಿದೆ ಕೋವಿಡ್ ಕೇಸ್: ಜಿಲ್ಲೆಯಲ್ಲಿ 21 ಕೋವಿಡ್ ಕೇಸ್ ದೃಢ:

ಅಪಘಾತದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕಿನ ಹಿಂಬದಿ ಕುಳಿತಿದ್ದ ವಿದ್ಯಾರ್ಥಿಗೂ ಗಂಭೀರ ಗಾಯವಾಗಿದೆ. ಕಾರು ಚಾಲಕನ ಅತಿವೇಗ ಮತ್ತಯನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version