Job News
Trending

IB Recruitment: ಉದ್ಯೋಗಾವಕಾಶ: SSLC ಆದವರಿಗೆ 677 ಹುದ್ದೆಗಳು

ಅಧಿಸೂಚನೆ ಪ್ರಕಾರ 21 ಸಾವಿರದಿಂದ 69 ಸಾವಿರ ಮಾಸಿಕ ವೇತನ

ಕೇಂದ್ರ ಗುಪ್ತಚರ ಇಲಾಖೆಯಲ್ಲಿ (IB Recruitment) ಖಾಲಿಯಲ್ಲಿ ಒಟ್ಟು 677 ಹುದ್ದೆಗಳು ಖಾಲಿಯಿದ್ದು, SSLC ವಿದ್ಯಾರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಧಿಸೂಚನೆ ಪ್ರಕಾರ 21 ಸಾವಿರದಿಂದ 69 ಸಾವಿರ ಮಾಸಿಕ ವೇತನ ಇರಲಿದೆ. ಎಂಟಿಎಸ್ ಹುದ್ದೆಗೆ ಆಯ್ಕೆಯಾದವರಿಗೆ 18 ಸಾವಿರದಿಂದ 56 ಸಾವಿರ ವೇತನ ನಿಗದಿಯಾಗಿದೆ.

ಬೃಹತ್ ನೇಮಕಾತಿ: SSLC, PUC, ITI ಆದವರು ಅರ್ಜಿ ಸಲ್ಲಿಸಬಹುದು: 92 ಸಾವಿರದ ವರೆಗೆ ವೇತನ: ಅಕ್ಟೋಬರ್ 31, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಹೌದು, (IB Recruitment) ಸೆಕ್ಯುರಿಟಿ ಅಸಿಸ್ಟೆಂಟ್ ಹಾಗು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 13, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆನ್‌ಲೈನ್ ಪರೀಕ್ಷೆ, ಮೋಟರ್ ಮೆಕ್ಯಾನಿಸಮ್, ಹಾಗು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಒಟ್ಟು ಹುದ್ದೆಗಳು677
ಇಲಾಖೆಕೇಂದ್ರ ಗುಪ್ತಚರ ಇಲಾಖೆ
ವಿದ್ಯಾರ್ಹತೆSSLC
ವೇತನ21 ಸಾವಿರದಿಂದ 69 ಸಾವಿರ

ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 27 ವರ್ಷವಾಗಿದೆ. ಪರಿಶಿಷ್ಟ ಜಾತಿ, ಪಂಗಡವದವರಿಗೆ 5 ವರ್ಷ , ಓಬಿಸಿಯವರಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ. ಇಂಟಲಿಜೆನ್ಸ್ ಬ್ಯೂರೋದ ಅಧಿಕೃತ ವೆಬ್‌ಸೈಟಿಗೆ ಹೋಗಿ ಆಸಕ್ತ- ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕಿನ ಮಾಹಿತಿಯನ್ನು ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕನವೆಂಬರ್ 13, 2023
ಅರ್ಜಿ ಸಲ್ಲಿಕೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button