Follow Us On

Google News
Job News
Trending

Job News: IRELನಲ್ಲಿ 88 ಹುದ್ದೆಗಳಿಗೆ ನೇಮಕಾತಿ: ಪಿಯುಸಿ, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಬಹುದು

ನವೆಂಬರ್ 14, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ನಲ್ಲಿ ಒಟ್ಟು 88 ಹುದ್ದೆಗಳು (Job News) ಖಾಲಿಯಿದ್ದು, ಈ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನವೆಂಬರ್ 14, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿಪ್ಲೋಮಾ, ಪಿಯುಸಿ, ಪದವಿ ಆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ 25 ಸಾವಿರದಿಂದ 72 ಸಾವಿರದ ವರೆಗೆ ಆರಂಭಿಕ ಮಾಸಿಕ ವೇತನ ಇರಲಿದೆ.

ಇದನ್ನೂ ಓದಿ: ಬೃಹತ್ ನೇಮಕಾತಿ: 1,720 ಹುದ್ದೆಗಳು: SSLC, ITI, PUC, DEGREE ಆದವರು ಅರ್ಜಿ ಸಲ್ಲಿಸಬಹುದು

ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್, ಭಾರತೀಯ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ, ಇದು ಅಪರೂಪದ ಮಣ್ಣಿನ ಲೋಹಗಳ ಗಣಿಗಾರಿಕೆ ಹಾಗು ಸಂಸ್ಕರಣೆಯಲ್ಲಿ ಪರಿಣತಿಯನ್ನು ಹೊಂದಿದೆ. ಡಿಪ್ಲೋಮಾ ಟ್ರೈನಿ, ಡಿಪ್ಲೋಮಾ ಟ್ರೈನಿ, ಮೈನಿಂಗ್ ಸರ್ವೇಯರ್, ಸೂಪರ್‌ವೈಸರಿ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್ ಸೇರಿ ಒಟ್ಟು 88 ಹುದ್ದೆಗಳಿಗೆ (Job News) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್‌ಸಿ-ಎಸ್‌ಟಿ-ಪಿಡಬ್ಲ್ಯುಬಿಡಿ-ಇಎಸ್‌ಎಂ ಹಾಗು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಜನರಲ್- ಇಡಬ್ಲ್ಯುಎಸ್- ಒಬಿಸಿ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. , ಕೌಶಲ್ಯ ಪರೀಕ್ಷೆ, ಲಿಖಿತ ಪರೀಕ್ಷೆ , ಕಂಪ್ಯೂಟರ್ ಟೆಸ್ಟ್ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಟೈನಿ 8 ಹುದ್ದೆಗಳು: ವಿದ್ಯಾರ್ಹತೆ-ಪದವಿ, ಟ್ರೈನಿ ಕೆಮಿಸ್ಟ್ 4 ಹುದೆಗಳು: ವಿದ್ಯಾರ್ಹತೆ-ಡಿಪ್ಲೋಮಾ, ಡಿಪ್ಲೋಮಾ ಟ್ರೈನಿ: 37 ಹುದ್ದೆಗಳು, ಗ್ರ‍್ಯಾಝುವೇಟ್ ಟ್ರೈನಿ: 7 ಹುದ್ದೆಗಳು: ವಿದ್ಯಾರ್ಹತೆ-ಪದವಿ, ಮೈನಿಂಗ್ ಮೇಟ್: 8 ಹುದ್ದೆಗಳು: ವಿದ್ಯಾರ್ಹತೆ-ದ್ವಿತೀಯ ಪಿಯುಸಿ, ಹೀಗೆ ಒಟ್ಟು 80 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಈ ಕೆಳಗಡೆ ನೀಡಲಾದ ಅಧಿಕೃತ ಕಂಪೆನಿಯ ಅಧಿಕೃತ ವೆಬ್‌ಸೈಟ್ ಗೆ ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕಂಪೆನಿಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ : IREL
ಒಟ್ಟು ಹುದ್ದೆಗಳು88
ಅಧಿಸೂಚನೆ 1ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ 2ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕನವೆಂಬರ್ 14, 2023

ಇನ್ನು ಹೆಚ್ಚಿನ ಉದ್ಯೋಗಾವಕಾಶ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button