Follow Us On

WhatsApp Group
Important
Trending

ಮನೆಯಲ್ಲಿ ಮಲಗಿದ್ದ ಅಪ್ರಾಪ್ತೆ ರಾತ್ರಿ ವೇಳೆ ನಾಪತ್ತೆ: ತಂದೆಯ ದೂರಿನಲ್ಲೇನಿದೆ?

ಹೊರ ಜಿಲ್ಲೆಯಿಂದ ಬಂದು ಕುಟುಂಬಸ್ಥರೊಂದಿಗೆ ವಾಸವಾಗಿದ್ದ ವಿದ್ಯಾರ್ಥಿನಿ

ಅಂಕೋಲಾ: ತಾಲೂಕಿನಲ್ಲಿ ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದ ಹೊರ ಜಿಲ್ಲೆಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳು, ರಾತ್ರಿಯ ವೇಳೆ ಮನೆಯಿಂದ ಕಾಣೆಯಾದ ಘಟನೆ ಘಟನೆ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ನಿವಾಸಿ ಹಾಲಿ ಅಂಕೋಲಾ ತಾಲೂಕಿನ ಶೆಟಗೇರಿಯಲ್ಲಿ ವಾಸವಾಗಿದ್ದ ಸಾವಿತ್ರಿ ಹನುಮಂತ ಪಂಚಪುತ್ರ(17) ಕಾಣೆಯಾದ ಯುವತಿ.

Job News: IRELನಲ್ಲಿ 88 ಹುದ್ದೆಗಳಿಗೆ ನೇಮಕಾತಿ: ಪಿಯುಸಿ, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಬಹುದು

ಅಕ್ಟೋಬರ್ 31 ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು ರಾತ್ರಿ 10 ಗಂಟೆಯಿಂದ 11 ಗಂಟೆ ನಡುವಿನ ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಗೆ ಹೋಗಿ ಕಾಣಿಯಾಗಿದ್ದಾಳೆ ಅಥವಾ ಯಾರೋ ಅಪಹರಿಸಿಕೊಂಡು ಹೋಗಿರಬಹುದು ಎಂದು ವಿದ್ಯಾರ್ಥಿನಿಯ ತಂದೆ ಹನುಮಂತ ಕೃಷ್ಣಪ್ಪ ಪಂಚಪುತ್ರ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ವಿದ್ಯಾರ್ಥಿನಿ ಕುರಿತು ಮಾಹಿತಿ ದೊರಕಿದರೆ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವಳೊಂದಿಗೆ ಇತ್ತೀಚೆಗೆ ಪರಿಚಯ ಬೆಳೆಸಿಕೊಂಡಿದ್ದ ಓರ್ವ ಸಲುಗೆಯಿಂದ ಇದ್ದ ಎನ್ನಲಾಗಿದ್ದು,ಆತನೇ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದೇ ? ಎಂದು ಕೆಲ ಸ್ಥಳೀಯರು ಮಾತನಾಡಿಕೊಂಡಂತಿದೆ. ಅಥವಾ ಆ ಹುಡುಗಿಯ ಕಾಣೆ ಪ್ರಕರಣದ ಹಿಂದಿರುವ ಕಾರಣಗಳೇನು ಎಂಬ ಕುರಿತು ಪೋಲಿಸ್ ತನಿಕೆಯಿಂದ ನಿಖರ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button