Follow Us On

WhatsApp Group
Important
Trending

ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಗೆ ಹೊಸ ಆಂಬ್ಯುಲೆನ್ಸ್ ಲೊಕಾರ್ಪಣೆ | ಖುದ್ದು ಆಂಬ್ಯುಲೆನ್ಸ್ ಚಾಲನೆ ಮಾಡಿ ಎಲ್ಲರ ಗಮನ ಸೆಳೆದ ಶಾಸಕ ಸುನೀಲ ನಾಯ್ಕ

ಭಟ್ಕಳ: ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಶಿರಾಲಿಗೆ ಮಂಜೂರಾದ ಹೊಸ ಆಂಬ್ಯುಲೆನ್ಸ ಅನ್ನು  ಸುನೀಲ ನಾಯ್ಕ  ಜನರ ಸೇವೆಗಾಗಿ ನೀಡಿದರು.

ಈ ವೇಳೆ ಮಾತನಾಡಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಬಾಲಚಂದ್ರ ಮೇಸ್ತಾ  ತಾಲೂಕಾ ಆಸ್ಪತ್ರೆ, ಭಟ್ಕಳ ಅಥವಾ ಖಾಸಗಿ ಅಂಬ್ಯುಲೆನ್ಸನ್ನೆ ನಂಬಿಕೊಂಡಿರುವ ಶಿರಾಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸಮುದಾಯ ಆರೋಗ್ಯ ಕೇಂದ್ರ, ಶಿರಾಲಿಗೆ  ಅಂಬ್ಯುಲೆನ್ಸನ್ನು ನೀಡುವ ನನ್ನ ಬಹುದಿನದ ಕನಸು ನನಸಾಗಿಸಿದೆ.  ಅಂಬ್ಯುಲೆನ್ಸನ್ನು ನೀಡಲು ಸಹಕರಿಸಿದ ವಿಧಾನ ಪರಿಷತ್ ಸದಸ್ಯರು ಎಸ್.ವಿ.ಸಂಕನೂರು, ಇದನ್ನು ತರುವಲ್ಲಿ ಅವಿರತ ಪರಿಶ್ರಮ ಮಾಡಿದ ಶಾಸಕ  ಸುನೀಲ ನಾಯ್ಕ, ರವರಿಗೆ  ಆಡಳಿತ  ವೈದ್ಯಾಧಿಕಾರಿಗಳಾದ ಡಾ. ಬಾಲಚಂದ್ರ ಮೇಸ್ತಾ ಹಾಗೂ  ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹೃತ್ ಧನ್ಯವಾದ ಸಲ್ಲಿಸಿದ್ದಾರೆ.

ಇದೆ ವೇಳೆ ಶಾಸಕ ಸುನೀಲ ನಾಯ್ಕ ಅಂಬ್ಯುಲೆನ್ಸ್ ಚಾಲನೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದರು.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button