Important
Trending

ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯ ಬಂಧನ

ದಾoಡೇಲಿ: ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಾಂಡೇಲಿ ನಗರ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳ ಹಿಂದೆ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳನೊಬ್ಬ ಮನೆಗೆ ನುಗ್ಗಿ 16 ಸಾವಿರ ರೂ ಮೌಲ್ಯದ ಮೊಬೈಲ್, 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಕಿ.ವಿ ಓಲೆ, 2000 ಮೌಲ್ಯದ ಬೆಳ್ಳಿಯ ಬ್ರೆಸ್‌ಲೈಟ್ ಸೇರಿದಂತೆ ಒಟ್ಟೂ ಅಂದಾಜು 78 ಸಾವಿರ ಮೌಲ್ಯದ ಸ್ವತ್ತುಗಳನ್ನು ಕಳ್ಳ ಕದ್ದೊಯ್ದಿದ್ದ.

ಈ ಘಟನೆ ಕುರಿತಂತೆ ಡಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ದಾಂಡೇಲಿಯ ಗಾಂಧಿನಗರದ ಆಶ್ರ ಕಾಲೋನಿಯ ನಿವಾಸಿ ಶ್ರೀಕಾಂತ್ ಸೀತಾರಾಮ ಗುಡೆ ಈತನನ್ನು ಬಂಧಿಸಿ, ಕಳುವು ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button