Important
Trending

ಎವರೆಸ್ಟ್ ಚಿಕನ್ ಮಸಾಲಾ ಬಳಸಬೇಡಿ: ಆಹಾರ ಸುರಕ್ಷತಾ ಅಧಿಕಾರಿ ಹೇಳಿದ್ದೇನು?

ದೇಶಾದ್ಯಂತ ಪೂರೈಸಿದ್ದರೆ ಹಿಂಪಡೆಯಲು ಸೂಚನೆ

ಕಾರವಾರ: ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಅಸುರಕ್ಷಿತ ರಾಸಾಯನಿಕದ ಪ್ರಮಾಣ ಹೆಚ್ಚಿದ್ದು, ಇದನ್ನು ಬಳಸದಂತೆ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಮಾಹಿತಿ ನೀಡಿದ್ದಾರೆ. ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಶೇಕಡಾ 0.01ರಷ್ಟು ಇರಬೇಕು. ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಪ್ರಮಾಣ ಶೇಕಡಾ 3.93ರಷ್ಟಿದೆ. ಹೀಗಾಗಿ ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಸಾರ್ವಜನಿಕರು ಇದನ್ನು ಸಾರ್ವಜನಿಕರು ಬಳಸಬಾರು ಎಂದು ಮಾಹಿತಿ ನೀಡಿದ್ದಾರೆ.

ಆಹಾರ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಎವರೆಸ್ಟ್ ಚಿಕನ್ ಮಸಾಲಾ ಪರೀಕ್ಷೆ ಮಾಡಿದ್ದೇವು. ಹೀಗಾಗಿ ಇದೀಗ ಈ ಎಲ್ಲಾ ಅಂಶ ಬೆಳಕಿಗೆ ಬಂದಿದ್ದು, ಎವರೆಸ್ಟ್ ಮಸಾಲಾ ಕಂಪನಿಗೆ ಈಗಾಗಲೇ ನೋಟಿಸ್ ಕಳುಹಿಸಿದ್ದೇವೆ. ಕೂಡಲೇ ಎವರೆಸ್ಟ್ ಚಿಕನ್ ಮಸಾಲಾ ಸರಬರಾಜು ನಿಲ್ಲಿಸಬೇಕು. ಈಗಾಗಲೇ ದೇಶಾದ್ಯಂತ ಪೂರೈಸಿದ್ದರೆ ಹಿಂಪಡೆಯಲು ಸೂಚನೆ ನೀಡಿದ್ದೇವೆ. ಎವರೆಸ್ಟ್ ಚಿಕನ್ ಮಸಾಲಾ ಖರೀದಿಸಿದ್ದರೆ ಜನರು ಅಂಗಡಿಗಳಿಗೆ ವಾಪಸ್ ನೀಡಿ ಎಂದರು. ಎವರೆಸ್ಟ್​ ಚಿಕನ್ ಮಸಾಲಾ ಮಾತ್ರವಲ್ಲ, ಸುಮಾರು 15 ತರಹದ ಮಸಾಲಾ ಪೌಡರ್ ಗಳನ್ನು ತಪಾಸಣೆಗೆ ಕಳುಹಿಸಿದ್ದೇವೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button