Important
Trending

ನುರಿತ 300 ವೈದ್ಯರು ಸೇವೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ: ಮಾರೂತಿ ಗುರೂಜಿ ಹೇಳಿಕೆ

ಅತ್ಯುತ್ತಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಬದ್ಧ ಎಂದು ಸ್ಪಷ್ಟನೆ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗು ಕೇಳಿಬರುತ್ತಿತ್ತು ಹೋರಾಟಗಳು ನಡೆದಿದ್ದವು, ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ತಮ್ಮ ತಮ್ಮ ಗೆಲುವಿಗಿಗಾಗಿ ಉಪೋಗಿಸುತ್ತಾ ಬಂದಿದರು ಯ್ಯಾವ ಉದ್ಯಮಿಗಳು ವೈಯಕ್ತಿವಾಗಿ ನಿರ್ಮಾಣಕ್ಕೂ ಕೈ ಹಾಕಿರಲಿಲ್ಲಾ ಆದರೆ,

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿಯವರು ಜಿಲ್ಲೆಯ ಜನರಿಗೆ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಸುದೀಕ್ಷಾ ಗ್ರುಪ್ ಕಂಪನಿಯ ಮುಖ್ಯಸ್ಥರು, ಮಾಜಿ ರಾಷ್ಟçಪತಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ ಡಾಕ್ಟರ್ ಸುಬ್ರಹ್ಮಣ್ಯ ಶರ್ಮ ಗೌರವರಂ ಅವರ ಜೊತೆಗೆ ಮಾತನಾಡಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಹೊನ್ನಾವರ ತಾಲೂಕಿನ ಅಳ್ಳಂಕಿ ಸಮೀಪ ಭೂಮಿ ಪೂಜೆ ನೆರವೇರಿಸಿದರು.

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೆಯ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿ ಧೀಫ ಬೇಳಗಿಸುವುದರ ಮೂಲಕ ನೆರವೇರಿಸಿದರು. ನಂತರ ಮಾತನಾಡಿ ಜಿಲ್ಲೆಗೆ ಏನು ಹಸಿವಾಗಿದೆ ಎನ್ನುವ ಉತ್ತರಕ್ಕಾಗಿ ಇಂದು ಶಂಕುಸ್ಥಾಪನೆಯಾಗಿದೆ. ಸ್ಪಂದಿಸುವ ವಿಶ್ವಾಸವಿದೆ. ನೀವು ಸ್ಪಂದಿಸದಿದ್ದರೆ ಜೋಳಿಗೆಯೊಂದಿಗೆ ನಿಮ್ಮ ಮನೆಮನೆಗೆ ಬರುತ್ತೇವೆ. ಶತಾಯ ಗತಾಯ ಆಡಿದಂತೆ ಮಾಡುವುದೇ ಶತಸಿದ್ದ. ನಮಗೆ ಹೋರಾಟ ಬೇಕಾಗಿಲ್ಲ. ಸಾತ್ವಿಕವಾಗಿ ನಾವು ಮಾಡುವ ಕಾರ್ಯವೇ ಉತ್ತರವಾಗಬೇಕು ಎಂದರು.

ನುರಿತ 300 ವೈದ್ಯರು ನಮ್ಮ ಕ್ಷೇತ್ರದ ಹೊರ ಜಿಲ್ಲೆಯವರು ಈ ಆಸ್ಪತ್ರೆಗೆ ಸೇವೆ ಸಲ್ಲಿಸಲು ಸನ್ನದ್ದರಾಗಿದ್ದಾರೆ. ನಮ್ಮನ್ನು ಆಳುವವರಿಗೆ ಇಚ್ಛಾಶಕ್ತಿಯ ಕೊರತೆಯಿದೆ. ನಾವೆಲ್ಲರೂ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿ ಉತ್ತರಕನ್ನಡ ಜಿಲ್ಲೆಯನ್ನು ಎತ್ತರಕ್ಕೆ ಏರಿಸೋಣ ಎಂದರು.

ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವಿನಯಾನಂದ ಸ್ವಾಮೀಜಿಯವರು ಮಾತನಾಡಿ, ಆಸ್ಪತ್ರೆ ನಿರ್ಮಾಣಕ್ಕೆ ಕೈಜೊಡಿಸುತ್ತಿರುವ ಸುಬ್ರಹ್ಮಣ್ಯ ಶರ್ಮ ಅವರು ವಿನಯ ಮತ್ತು ಸಂಸ್ಕಾರವನ್ನು ಹೊಂದಿದ ದೊಡ್ಡ ವ್ಯಕ್ತಿಯಾಗಿದ್ದಾರೆ. ಅವರ ಸಹಯೋಗದಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣವಾಗಿ ಜನರಿಗೆ ಅನುಕೂಲವಾಗಲಿ ಎಂದರು.

ಸರ್ವಪಲ್ಲಿ ರಾಧಾಕೃಷ್ಣ ಅವರ ಮೋಮ್ಮಗ, ಬೆಂಗಳೂರಿನ ಸುದೀಕ್ಷ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ಶರ್ಮ ಮಾತನಾಡಿ, ಪ್ರಪಂಚವೇ ಉತ್ತರ ಕನ್ನಡ ಜಿಲ್ಲೆಯನ್ನು ನೋಡುವ ಭಾಗ್ಯ ಒದಗಿ ಬಂದಿದೆ. ಆರೋಗ್ಯ ಶಿಕ್ಷಣದ ಜೊತೆಯಲ್ಲಿ ವೈದ್ಯಕೀಯ, ತಂತ್ರಜ್ಞಾನ, ಹೆಲಿಪ್ಯಾಡ್ ನಿರ್ಮಿಸಬೇಕೆಂಬ ಗುರೂಜಿಯವರ ಸಂಕಲ್ಪವನ್ನು ಈಡೇರಿಸುತ್ತೇವೆ. ಮಾತು ತಪ್ಪಲ್ಲ, ಪ್ರಾಣ ಉಳಿಸುತ್ತೇವೆ. ಪ್ರವಾಸೋದ್ಯಮ ಕೇಂದ್ರವಾಗಿಸುವಲ್ಲಿ ಕೆಲಸ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಪತ್ರಕರ್ತ ಬಿ. ಗಣಪತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಸಾಹಿತಿ ಮಹಾಬಲಮೂರ್ತಿ ಹೆಗಡೆ ಕೊಡ್ಲಕೆರೆ, ಮಂಗಳೂರಿನ ಎಸ್.ಎಸ್.ಸೊಲ್ಯೂಷನ್‌ನ ಸನ್ನಿತ್ ಶೇಟ್, ಕಟ್ಟಡ ವಿನ್ಯಾಸಕಾರ ಮಹೇಶ ದೋಹಿಪಡೆ, ಅರ್ಪಿತಾ ಮಾರುತಿ ಗುರೂಜಿ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button