Big NewsImportant
Trending

ಮಗನಿಗೆ ಕೆಲಸದ ಆಸೆ ತೋರಿಸಿ ತಾಯಿಯಿಂದ 2ಲಕ್ಷ ಹಣ ಪಡೆದು ವಂಚಿಸಿದ ಸಂಬoಧಿ ಮಹಿಳೆ

ಕಾರವಾರ: ತಮ್ಮ ಸಂಬoಧಿ ಮಹಿಳೆಯೊಬ್ಬಳು ಮಗನಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುವ ಹೇಳಿ 1.96 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ಇಲ್ಲಿನ ಕಾಜುಭಾಗ ನಿವಾಸಿ ಶಾಂತಿಪ್ರೀಯಾ ದೂರು ನೀಡಿದ್ದಾರೆ. ತಮ್ಮ ಸಂಬoಧಿಯಾದ ನಗರದ ಅಕ್ಷತಾ ನಾಯ್ಕ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.. ನನಗೆ ಅಲ್ಲಿನ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅವರ ಪರಿಚಯವಿದೆ. ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಟ್ರೇನಿಂಗ್ ನೆಪದಲ್ಲಿ 80 ಸಾವಿರ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ಬೈಕ್ ಸವಾರರ ಮೇಲೆ ದಾಳಿ ಮಾಡಿದ ಚಿರತೆ: ಸಾರ್ವಜನಿಕರಲ್ಲಿ ಭಯ

ಕಂಪನಿಯ ಇ-ಮೇಲ್ ನಿಂದ ಕೆಲವು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಹೆಚ್ಚುವರಿಯಾಗಿ 30 ಹಾಗೂ 86 ಸಾವಿರ ಒಟ್ಟೂ 1.96 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಂಪನಿಗೆ ತೆರಳಿ ವಿಚಾರಿಸಿದಾಗ ಆಕೆ ಕಳಿಸಿದ ದಾಖಲೆ ನಕಲಿಯಾಗಿದೆ ಎಂದು ತಿಳಿದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button