Follow Us On

WhatsApp Group
Important
Trending

ಕಳ್ಳಭಟ್ಟಿ ತಯಾರಿಗೆ ಕಾಕಂಬಿ ಸಂಗ್ರಹ: ಆರೋಪಿ ಬಂಧನ: ಅಬಕಾರಿ ಅಧಿಕಾರಿಗಳ ದಾಳಿ

ಸಿದ್ದಾಪುರ: ಕಳ್ಳಭಟ್ಟಿ ಸರಾಯಿ ತಯಾರಿಸುವುದಕ್ಕಾಗಿ ಅಕ್ರಮವಾಗಿ ಕಬ್ಬಿನ ರಸ ಕಾಯಿಸುವ ಉದ್ದೇಶ ದಿಂದ ಶೇಖರಣೆ ಆದ ಬೆಲ್ಲದ ಜೆಂಡು( ಕಾಕಂಬಿ) ನ್ನು ಒಂಭತ್ತು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಪ್ರತಿಯೊಂದರಲ್ಲಿ 20 ಲೀಟರಿನಂತೆ ಹಾಗೂ 12 ಲೀಟರಿನಷ್ಟು ಒಟ್ಟು 192 ಲೀಟರ್ ಕೊಳೆ ಹಾಕಿ, ಒಂದು ಹೊಂಡ ತೋಡಿ ಅದರ ಮೇಲೆ ಒಣ ಗಿಡದ ಎಲೆ ಮತ್ತು ಕೊಂಬೆಗಳ ಅಡಿ ಅಡಗಿಸಿಟ್ಟದ್ದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತುಪಡಿಸಿ, ಆರೋಪಿಯನ್ನು ದಸ್ತಗಿರಿ ಮಾಡಿದ ಘಟನೆ ಹಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಸೂರು ಮಜಿರೆಯ ಈಚಲುತಗ್ಗು ಗ್ರಾಮದಲ್ಲಿ ನಡೆದಿದೆ.

ನಾರಾಯಣ ಚೌಡಾ ನಾಯ್ಕ ವಾಸ:- ಹುಸೂರು, ಪೋ:- ಹಲಗೇರಿ ತಾ:-ಸಿದ್ದಾಪುರ ಎಂಬಾತನು ತಾನು ಕಬ್ಬಿನ ಆಲೆಮನೆ ನಡೆಸುತ್ತಿರುವ ಸ್ಥಳದಲ್ಲಿ ಹೊಂದಿರುವ ಗುಡಿಸಲಿನ ಬಲ ಭಾಗದಲ್ಲಿ ಸಂಗ್ರಹಿಸಿಟ್ಟದ್ದ ವೇಳೆ ದಾಳಿ ನಡೆಸಿದ್ದಾರೆ.

ವನಜಾಕ್ಷಿ ಎಮ್.ಅಬಕಾರಿ ಉಪ-ಆಯುಕ್ತರು ಕಾರವಾರ ರವರ ನಿರ್ದೇಶನದಂತೆ, ಮಹೇಂದ್ರ ಎಸ್. ನಾಯ್ಕ ಮಾರ್ಗದರ್ಶನದಂತೆ ಜ್ಯೋತಿಶ್ರೀ ಜಿ.ನಾಯ್ಕ ಅಬಕಾರಿ ನಿರೀಕ್ಷಕರು ಶಿರಸಿ ಇವರು ದಾಳಿ ನಡೆಸಿ, ಮೊಕದ್ದಮೆಯನ್ನು ದಾಖಲಿಸಿದ್ದು, ದಾಳಿಯಲ್ಲಿ ಡಿ.ಎನ್.ಶಿರಸಿಕರ್ ಅಬಕಾರಿ ಉಪ-ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಲೋಕೇಶ್ವರ ಬೋರ್ಕರ್, ಎನ್.ಕೆ ವೈದ್ಯ, ಡಿ.ಎಮ್. ಗಾಯಕವಾಡ, ಗಂಗಾಧರ ಕಲ್ಲೇದ್, ಬಸವರಾಜ ಒಂಟಿ, ಈರಣ್ಣ ಗಾಳಿ ಪಾಲ್ಗೊಂಡಿದ್ದರು ಜಪ್ತಿಯಾದ ಸ್ವತ್ತಿನ ಅಂದಾಜು ಬೆಲೆ ರೂ.19200/-ಆಗಿರುತ್ತದೆ..

ವಿಸ್ಮಯ ನ್ಯೂಸ್ ದಿವಾಕರ್ ಸಂಪಖಂಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button