ಒಂದೂವರೆ ವರ್ಷದ ಗಂಡು ಚಿರುತೆಯೊಂದು ಆಹಾರ ಅರಸಿ ಹೋಗುತಿದ್ದ ವೇಳೆ ಖಾಸಗಿ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿದ ಘಟನೆ ಶಿರಸಿ ತಾಲೂಕು ಜಾನ್ಮನೆ ವಲಯದ ಶಿರಗುಣಿ ಗ್ರಾಮದಲ್ಲಿ ನಡೆದಿದೆ.
ಚಿರತೆ ಚೀರಾಟಕ್ಕೆ ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗ ವನ್ಯಜೀವಿ ವಲಯದ ವೈದ್ಯರ ತಂಡಕ್ಕೆ ಮಾಹಿತಿ ನೀಡಿದ್ದು ಹಲವು ಘಂಟೆಗಳ ರಕ್ಷಣೆ ಕಾರ್ಯದಲ್ಲಿ ಕೊನೆಗೂ ಚಿರತೆಯನ್ನು ಜೀವಂತ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಈ ಹಿಂದೆ ಶಿರಸಿ ಭಾಗದಲ್ಲಿ ಕಪ್ಪು ಚಿರತೆಯೊಂದು ತಂತಿಗೆ ಸಿಲುಕಿದ್ದಾಗ ರಕ್ಷಣಾ ಕಾರ್ಯ ತಡವಾದ್ದರಿಂದ ಸಾವು ಕಂಡಿತ್ತು.
ಆದರೇ ಈ ಬಾರಿ ಶಿರಸಿ ಉಪ ಅರಣ್ಯ ಸೌಂರಕ್ಷಣಾಧಿಕಾರಿ ಎಸ್ .ಜಿ ಹೆಗಡೆ ನೇತ್ರತ್ವದಲ್ಲಿ ಶಿವಮೊಗ್ಗದ ವನ್ಯಜೀವಿ ವೈದ್ಯರ ಸಹಕಾರದಿಂದ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.