Important
Trending

ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ: ಓರ್ವ ಸ್ಥಳದಲ್ಲೇ ಸಾವು

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾನೈಟ್ ತುಂಬಿಕೊoಡು ಇಳಕಲ್‌ನಿಂದ ಶಿರಾಲಿ ಕಡೆಗೆ ಹೊರಟಿದ್ದ ವೇಳೆ, ವೇಗದ ಚಾಲನೆಯಿಂದ ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಭಟ್ಕಳ ತಾಲೂಕಿನ ಶಿರಾಲಿಯ ಸಂದೀಪ ತುಳಸಿ ದೇವಾಡಿಗ (37) ಮೃತ ವ್ಯಕ್ತಿ. ಲಾರಿಯಲ್ಲಿದ್ದ ಭಟ್ಕಳದ ಬೈಲೂರಿನ ಭರತ ನಾರಾಯಣ ದೇವಾಡಿಗ, ಶಿರಾಲಿಯ ವೆಂಕಟೇಶ ಮಂಜುನಾಥ ದೇವಾಡಿಗ, , ಬಾಗಲಕೋಟೆ ಇಳಕಲ್ ನ ವಿಶ್ವನಾಥ ಸಂಗಪ್ಪ ಮಡ್ಡಿಕಾರ, ಭಟ್ಕಳ ರಘುನಾಥ ರಸ್ತೆಯ ಅನಂತ ನಾಗಪ್ಪ ದೇವಾಡಿಗ, ಈರಣ್ಣ ಮಲ್ಲಯ್ಯ ಕೊಣ್ಣೂರು ಗಾಯಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button