Focus News
Trending

ಜಿ.ಎಸ್.ಬಿ ವಾರ್ಷಿಕೋತ್ಸವ 2022: ಸಾಧಕರಿಗೆ ಸನ್ಮಾನ

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ 24ನೇ ವಾರ್ಷಿಕೋತ್ಸವವು ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀ ಪ್ರದೀಪ ಜಿ ಪೈ, ವ್ಯವಸ್ಥಾಪಕ ನಿರ್ದೇಶಕರು, ಹಾಂಗ್ಯೋ ಐಸ್ ಕ್ರೀಮ್ಸ್ ltd ರವರು ಭಟ್ಕಳ ಜಿ.ಎಸ್.ಎಸ್ ಸಂಸ್ಥೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿ, “ಯುವ ಜನತೆ ಸಮಾಜದ ಆಸ್ತಿ, ಯುವ ಸಮುದಾಯವು ಸಾಮಾಜಿಮುಖಿ ಯಾಗಬೇಕು ” ಎಂದು ತಿಳಿಸಿದರು.

ಸಂಸ್ಥಾಪಕಾಧ್ಯಾಕ್ಷರಾದ ಶ್ರೀ ಸುರೇಂದ್ರ ಶಾನಭಾಗ ರವರು ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ, ಶಿಕ್ಷಣವು ಸಮೃದ್ಧ ಜೀವನದ ಕೀಲಿಕೈ ,ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಹನುಮಂತ ಮಾಳಪ್ಪ ಪೈ (ಪುತ್ತು ಪೈ) ರವರ ಸ್ಮರಣಾರ್ಥ ಶ್ರೀ ಹನುಮಂತ ಮಾಳಪ್ಪ ಪೈ ಸೇವಾ ಸಾಧಕ ಪುರಸ್ಕಾರ ವನ್ನು ದಿ. ಹರಿಶ್ಚಂದ್ರ ಕಾಮತ ರವರಿಗೆ ಮರಣೋತ್ತರವಾಗಿ ಅವರ ಕುಟುಂಬಸ್ಥರಿಗೆ ನೀಡಲಾಯಿತು. ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ನೀಡಿದ ಪುರಸಭಾ ನಾಮನಿರ್ದೇಶಿತ ಸದಸ್ಯೆಯಾದ ಶ್ರೀಮತಿ ರಜನಿ ಮಂಜುನಾಥ ಪ್ರಭು, ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಬಿ.ಎಸ್.ಸಿ ಯಲ್ಲಿ 6ನೇ ರ‍್ಯಾಂಕ ಪಡೆದ ಕುಮಾರಿ ಅಶ್ವಿನಿ ಗುರುರಾಸ ಪೈ, ಬಿ.ಎಸ್.ಸಿ ಯಲ್ಲಿ 2ನೇ ರ‍್ಯಾಂಕ ಹಾಗೂ ಗಣಿತದಲ್ಲಿ ಬಂಗಾರದ ಪದಕ ಪಡೆದ ಕುಮಾರಿ ಶ್ರೇಯಾ ಭಾಸ್ಕರ ಪೈ ರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಶ್ರೀನಾಥ ಪೈ ರವರು ರಚಿಸಿದ ಭಟ್ಕಳ ತಾಲೂಕಿನ ಮಾರುತಿ ಮಂದಿರಗಳು ಎನ್ನುವ ಗ್ರೀನ್ ಬುಕ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ಸುಬ್ರಾಯ ಕಾಮತ, ಜಿ.ಎಸ್.ಎಸ್ ಅಧ್ಯಕ್ಷರಾದ ಕಲ್ಪೇಷ ಪೈ, ಮಹಿಳಾ ಸಮಿತಿ ಅಧ್ಯಕ್ಷರಾದ ನೀತಾ ಕಾಮತ, ಗೌರವಾಧ್ಯಕ್ಷ ನರೇಂದ್ರ ನಾಯಕ, ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ, ಕಿರಣ ಶಾನಭಾಗ, ಉದ್ಯಮಿ ನಾರಾಯಣ ಶಾನಭಾಗ, ಅಚ್ಚುತ ಕಾಮತ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿ.ಎಸ್.ಬಿ ಸಮಾಜ ಬಾಂಧವರಿoದ ರಾಷ್ಟçಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವಂತಹ, ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ, ಎಲ್.ಎನ್.ಆರ್ ಮಿಲ್ ರವರ ಪ್ರಾಯೋಜಕತ್ವದಲ್ಲಿ ಲಕ್ಕಿ ಜಿ.ಎಸ.ಬಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿoದ ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುರುದಾಸ್ ಪ್ರಭು ನಿರೂಪಿಸಿದರು, ದೀಪಕ ನಾಯಕ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀನಾಥ ಪೈ ವಂದಿಸಿದರು.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button