ಕರ್ನಾಟಕ ರಾಜ್ಯ ಬಾಡಿಬಿಲ್ಡಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರೊ. ಜಿ. ಡಿ. ಭಟ್ಟ ಆಯ್ಕೆ: ಅಭಿನಂದನೆ
ಇತ್ತೀಚೆಗೆ ನಂಜನಗೂಡಿನಲ್ಲಿ ನಡೆದ ಕರ್ನಾಟಕ ರಾಜ್ಯ ಬಾಡಿಬಿಲ್ಡಿಂಗ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಕೆನರಾ ಕಾಲೇಜ್ ಸೊಸೈಟಿ(ರಿ)ಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಜಿ. ಡಿ. ಭಟ್ಟ ಇವರು ಕರ್ನಾಟಕ ರಾಜ್ಯ ಬಾಡಿಬಿಲ್ಡಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಸಂಸ್ಥೆಯ ಅಧ್ಯಕ್ಷರಾಗಿ ರಾಷ್ಟ್ರೀಯ ತೀರ್ಪುಗಾರರಾದ ಬೆಂಗಳೂರಿನ ಶ್ರೀ. ಜೆ. ನೀಲಕಂಠ, ಕಾರ್ಯಾಧ್ಯಕ್ಷರಾಗಿ ಅಂತರಾಷ್ಟ್ರೀಯ ತೀರ್ಪುಗಾರರಾದ ಬೆಳಗಾವಿಯ ಶ್ರೀ. ಅಜಿತ್ ಸಿದ್ಧಣ್ಣನವರ ಹಾಗೂ ಖಜಾಂಚಿಯಾಗಿ ರಾಷ್ಟ್ರೀಯ ತೀರ್ಪುಗಾರರಾದ ಮಂಗಳೂರಿನ ಶ್ರೀ. ದಿಲೀಪ್ ಕುಮಾರ ಅವರು ಆಯ್ಕೆಯಾಗಿರುತ್ತಾರೆ.
ಪ್ರೊ. ಜಿ. ಡಿ. ಭಟ್ಟ ಇವರು ರಾಷ್ಟ್ರೀಯ ತೀರ್ಪುಗಾರರಾಗಿ ಹಾಗೂ ಉದ್ಘೋಷಕರು(ಅನೌನ್ಸರ್) ಆಗಿ ರಾಜ್ಯದಾದ್ಯಂತ ಖ್ಯಾತರಾಗಿರುತ್ತಾರೆ. ಉತ್ತರಕನ್ನಡ ಜಿಲ್ಲಾ ದೇಹದಾರ್ಢ್ಯ ಸಂಸ್ಥೆಯ ಕಾರ್ಯದರ್ಶಿಗಳು, ದಕ್ಷಿಣ ಭಾರತ ದೇಹದಾರ್ಢ್ಯ ಸಂಸ್ಥೆಯ ಶಿಸ್ತುಸಮಿತಿಯ ಸದಸ್ಯರು, ಕೇಂದ್ರಸರಕಾರದ ಮಾನ್ಯತೆ ಪಡೆದ ಫಿಟ್ನೆಸ್ ಟ್ರೇನರ್‌ರಾಗಿಯೂ, 27 ವರ್ಷಗಳಿಂದ ಕೆನರಾ ಕಾಲೇಜ್ ಸೊಸೈಟಿ(ರಿ) ಅಡಿಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿವಹಿಸುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಬಾಡಿ ಬಿಲ್ಡಿಂಗ್ ತಂಡದ ಆಯ್ಕೆ ಹಾಗೂ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾಜ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ ಜಿಲ್ಲೆಯ ಪ್ರಥಮ ವ್ಯಕ್ತಿ ಎಂಬ ಹಿರಿಮೆಗೆ ಇವರು ಪಾತ್ರರಾಗಿದ್ದಾರೆ. ಇವರ ಆಯ್ಕೆಯು ಜಿಲ್ಲೆಯ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು ಜಿಲ್ಲಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಎಸ್. ಡಿ. ನಾಯ್ಕ ಹಾಗೂ ಎಲ್ಲ ಪದಾಧಿಕಾರಿಗಳು ಅವರನ್ನು ಅಭಿನಂದಿಸಿದ್ದಾರೆ.
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.