Follow Us On

WhatsApp Group
Important
Trending

ಸಾಂಪ್ರದಾಯಿಕ ಹಗರಣ ಪ್ರದರ್ಶನ: ಹಬ್ಬಕ್ಕೆ ವಿಶೇಷ ಮೆರಗು

ಅಂಕೋಲಾ: ತಾಲೂಕಿನಲ್ಲಿ ಯುಗಾದಿ ಹಬ್ಬ ಬಂತೆoದರೆ ಎಲ್ಲರ ಕಣ್ಮನ ಗ್ರಾಮೀಣ ಪ್ರದೇಶವಾದ ಬಡಗೇರಿಯತ್ತ ಸೆಳೆಯುತ್ತದೆ. ನೂರಾರು ವರ್ಷಗಳ ಇತಿಹಾಸ ಇರುವ ಇಲ್ಲಿಯ ಸ್ಥಳೀಯರ ಸಾಂಪ್ರದಾಯಿಕ ಆಚರಣೆ ಜೊತೆಗೆ ಹಗರಣ ಪ್ರದರ್ಶನ ಈ ವರ್ಷವೂ ಹಬ್ಬದ ಕಳೆಗೆ ವಿಶೇಷ ಮೆರಗು ತಂದಿತು. ಶಾಸಕ ಸತೀಶ್ ಸೈಲ್ ಬಡಗೇರಿಯ ಯುಗಾದಿ ಸಂಭ್ರಮ ಕಂಡು,ಹಾಲಕ್ಕಿಗಳ ಸಂಘಟನೆ ಮತ್ತು ಪರಂಪರೆಗೆ ಮೆಚ್ಚುಗೆ ಸೂಚಿಸಿದರು. ಹಿಂದುಗಳ ಹೊಸ ವರ್ಷಾಚರಣೆ ಯುಗಾದಿ ಹಬ್ಬ ನಾಡಿನಾದ್ಯಂತ ಎಲ್ಲಡಿಯು ಸಡಗರ ಸಂಭ್ರಮದಿoದ ನಡೆದಿದೆ.

ಅಂಕೋಲಾ ತಾಲೂಕಿನ ಮಟ್ಟಿಗೆ ಹೇಳುವುದಾದರೆ,ಯುಗಾದಿ ಹಬ್ಬ ಎಂದರೆ ಅದು ಬಡಗೇರಿಯ ಹಾಲಕ್ಕಿ ಗಳ ವಿಶೇಷ ಪೂಜೆ ,ಹಗರಣ ಪ್ರದರ್ಶನ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧವಾಗಿದ್ದು,ಅದನ್ನು ನೋಡಲೆಂದೆ ಎಲ್ಲೆಡೆಯಿಂದ ಸಾವಿರಾರು ಜನ ಬಂದು ಸೇರುತ್ತಾರೆ. ಹಬ್ಬದ ದಿನದಂದು ನಡೆಯುವ ಹಗರಣ ಪ್ರದರ್ಶನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸುವ ಹಲವು ರೀತಿಯ ಪೌರಾಣಿಕ ಮತ್ತು ಸಾಮಾಜಿಕ, ರಾಜಕೀಯ ಮತ್ತಿತರ ಚಿಣಕು ಎಲ್ಲರ ಗಮನ ಸೆಳೆಯುತ್ತದೆ. ಇನ್ನು ಕೆಲವು ಪ್ರದರ್ಶನಗಳು ಜನಜಾಗ್ರತಿ, ಪರಿಸರ ಜಾಗೃತಿ,ದೇಶದ ಆಗುಹೋಗುಗಳ ಕುರಿತು ಎಂಥವರ ಮನವನ್ನು ತಟ್ಟುವಂತಿರುತ್ತದೆ.

ಸ್ಥಳೀಯ ಆರಾಧ್ಯ ದೇವ ಬೇಟೆ ಬೀರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಡೆದ ಈ ಬಾರಿಯ ಹಗರಣದಲ್ಲಿ ಕೆಲ ತಾಂತ್ರಿಕ ಕೌಶಲ್ಯ,ದೇಶದ ಆಗುಹೋಗುಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಿದ್ದೂ ಕಂಡುಬoದಿದೆ. ಈ ಮೂಲಕ ಹಲವು ಪ್ರದರ್ಶನ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಅಂಕೋಲಾ ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನರು ಪಾಲ್ಗೊಂಡು ಯುಗಾದಿ ಹಗರಣ ಕಣ್ತುಂಬಿಸಿಕೊoಡರು.

ಈ ಹಿಂದಿನಿoದಲೂ ಬಡಿಗೇರಿಯ ಹಲವು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುವ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಅವರು ಈ ಬಾರಿ ಮತ್ತೊಮ್ಮೆ ಯುಗಾದಿ ಸಂಭ್ರಮದಲ್ಲಿ ಪಾಲ್ಗೊಂಡು ಹಗರಣವನ್ನು ವೀಕ್ಷಿಸಿ ,,ಬುಡಕಟ್ಟು ಹಾಲಕ್ಕಿ ಜನಾಂಗದ ವಿಶೇಷ ಪ್ರದರ್ಶನ,ಅವರ ಯೋಚನೆ ಮತ್ತು ಯೋಜನಾ ಶೈಲಿ,ಹಾಲಕ್ಕಿ ಗಳ ಸಂಘಟನೆ ಮತ್ತು ಸಾಂಪ್ರದಾಯಿಕ ಪರಂಪರೆ ಮುಂದುವರಿಸುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಥಳೀಯರು ಸೆರಿದಂತೆ ಹಲವು ಪ್ರಮುಖರು,ಶಾಸಕರ ಆಪ್ತರು,ಇತರರಿದ್ದರು.

ಕೇಣಿ ಆಟದ ಮೈದಾನದಿಂದ ಬಾವಿಕೇರಿ ಬಾರ್ಡರವರೆಗೆ ಬಹು ದೂರದಲ್ಲಿ ವಾಹನಗಳ ನಿಲುಗಡೆ,ಭಾರಿ ಜನಜಂಗುಳಿ ಕಂಡುಬoತು.ಸಿಪಿಐ ಶ್ರೀಕಾಂತ್ ತೋಟಗಿ ಮಾರ್ಗದರ್ಶನದಲ್ಲಿ,ಪಿಎಸ್ಐ ಗಳಾದ ಉದ್ದಪ್ಪ ಧರೆಪ್ಪನವರ, ಸುಹಾಸ , ಮತ್ತು ಜಯಶ್ರೀ ಪ್ರಭಾಕರ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button