Follow Us On

WhatsApp Group
Important
Trending

ಸಮುದ್ರ ಸೇರಿದ 85 ಕಡಲಾಮೆ ಮರಿಗಳು: ಸಾಂಪ್ರದಾಯಿಕ ಪೂಜೆ

ಹೊನ್ನಾವರ: ಟೊಂಕಾ ಕಡಲ ತೀರದಲ್ಲಿ ಕಡಲಾಮೆ ಗೂಡು ನಂಬರ್ 8 ರಿಂದ ಬಂದ 85 ಆಮೆ ಮರಿಗಳ ಸಮುದ್ರಕ್ಕೆ ಬೀಡಲಾಯಿತು. ಹೊನ್ನಾವರ ವಾಣಿಜ್ಯ ಬಂದರಿನ ವ್ಯಾಪ್ತಿಯಲ್ಲಿ ಗುರುತಿಸಿದ ಒಟ್ಟು 17 ಕಡಲಾಮೆ ಮೊಟ್ಟೆ ಇಟ್ಟ 7ನೇ ಗೂಡಿನಿಂದ 82 ಮರಿಬಿಡಲಾಗಿತ್ತು. ಇದಲ್ಲದೆ ಆಮೆ ಗೂಡು ನಂಬರ್ 4- 5 ರಿಂದ 193 ಮರಿ ಕೆಲವು ದಿನದ ಹಿಂದೆ ಸಮುದ್ರಕ್ಕೆ ಸೇರಿವೆ.

ಹೊನ್ನಾವರ ಅರಣ್ಯ ವಲಯಾಧಿಕಾರಿ ವಿಕ್ರಂ ನೇತ್ರ ವ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೀನುಗಾರರು, ರಾಜ್ಯ ಜೀವವೈವಿಧ್ಯಮ ಮಂಡಳಿ ಸದಸ್ಯರು, ಪುಟಾಣಿ ಮಕ್ಕಳು ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟರು. ಸ್ಥಳೀಯ ಮೀನುಗಾರ ಮುಖಂಡ ಗಣಪತಿ ಈಶ್ವರ ತಾಂಡೇಲ್ ಕಡಲಾಮೆ ಮರಿಗಳಿಗೆ ಪೂಜೆ ಸಲ್ಲಿಸಿದರು.

ವಿಸ್ಮಯ ನ್ಯೂಸ್ , ಹೊನ್ನಾವರ

Back to top button