Follow Us On

WhatsApp Group
Focus News
Trending

SSLC ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ: ಶಾಲೆಗೆ ಟಿ.ವಿ ಕೊಡುಗೆ

ಶ್ರೀ ಭಾರತೀಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕವಲಕ್ಕಿಯಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ ಮತ್ತು ಬಹುಮಾನ ವಿತರಣೆಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ ಭಾರತೀಎಜ್ಯುಕೇಶನ್‌ಟ್ರಸ್ಟ್(ರಿ.) ಕವಲಕ್ಕಿಯಅಧ್ಯಕ್ಷರಾದ ಶ್ರೀ ಉಮೇಶ ವಿ. ಹೆಗಡೆಯವರು, ಹಾಗೂ ಶ್ರೀ ವಿ.ಜಿ.ಹೆಗಡೆಗುಡ್ಗೆ, ಸವೇದ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಂಶುಪಾಲರು ಮತ್ತುಮುಖ್ಯಾಧ್ಯಾಪಕಿಯರಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ಭಾರತೀಎಜ್ಯೂಕೇಶನ್‌ಟ್ರಸ್ಟ್(ರಿ.) ಕವಲಕ್ಕಿಯಅಧ್ಯಕ್ಷರಾದ ಶ್ರೀ ಉಮೇಶ ವಿ. ಹೆಗಡೆಯವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆಯುವುದರಜೊತೆಗೆ ನಾಲ್ಕು ಜನಕ್ಕೆ ಕೆಲಸ ಕೊಡುವ ಹಾಗೆ ಬೆಳೆಯಬೇಕು ಎಂದುಕರೆಕೊಟ್ಟರು.ಅಷ್ಟೇ ಅಲ್ಲದೆಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.ಪ್ರಾಂಶುಪಾಲರಾದ ಶ್ರೀ ವಿ.ಜಿ.ಹೆಗಡೆಯವರುಶ್ರೀ ಭಾರತೀ ವಿದ್ಯಾರ್ಥಿಗಳಿಗೆ ವಿದ್ಯೆಯಜೊತೆಗೆ ಸಂಪತ್ತು ಸಿಗುವಂತಾಗಲಿ, ಶ್ರೀ ಎಂದರೆ ಸಂಪತ್ತು ಭಾರತೀಎಂದರೆ ವಿದ್ಯೆಎನ್ನುವುದನ್ನು ಸಾರ್ಥಕ ಮಾಡಲಿ ಎನ್ನುವ ಮಾತನ್ನು ಹೇಳಿದರು. ಅಷ್ಟೆ ಅಲ್ಲದೆಇಲ್ಲಿನ ವಿದ್ಯಾರ್ಥಿಗಳು ಇಲ್ಲಿ ಅಷ್ಟೆ ಅಲ್ಲದೇ ದಿಲ್ಲಿವರೆಗೆಅವರ ಸಾಧನೆ ಮುಟ್ಟುವಂತಾಗಲಿ ಎಂದು ಹಾರೈಸಿದರು.

2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಶಾಲೆಗೆ ಟಿ.ವಿಯನ್ನುಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಶಾನ್‌ಭಾಗ್ , ಸುಕೃತಾ ಭಟ್ ಮತ್ತು ನೀರಜ್ ಹೆಗಡೆಮಾತನಾಡಿ ಶಾಲೆಯಲ್ಲಿತಾವು ಕಳೆದ ಉತ್ತಮಕ್ಷಣಗಳ ಬಗ್ಗೆ ಮೆಲುಕು ಹಾಕಿದರು ಹಾಗೂ ತಾವು ಶ್ರೀ ಭಾರತೀಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆಎಂದು ಅನಿಸಿಕೆ ವ್ಯಕ್ತಪಡಿಸಿದರು.ಮತ್ತು ಈ ಸಂದರ್ಭದಲ್ಲಿ ಹಾಲ್‌ಟಿಕೆಟ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಸಹಶಿಕ್ಷಕಿಯರಾದ ಶ್ರೀಮತಿ ರೇಷ್ಮಾಜೊಗಳೇಕರ್ ನಿರೂಪಿಸಿದರು. ಕುಮಾರಿಅಂಜನಾ ಶೆಟ್ಟಿ ಸ್ವಾಗತಿಸಿದರು.ಕುಮಾರಿಅಂಜಲಿ ಫರ್ನಾಂಡಿಸ್‌ರವರು ವಂದಿಸಿದರು.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button