Focus News
Trending

covid-19 ವಿಮಾ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ನಿಮ್ಮ ಫೋನ್ ಪೇ ಗೆ ಹಾಕುತ್ತಾರೆ ಕತ್ತರಿ

ಮುರ್ಡೇಶ್ವರ ಪೊಲೀಸರಿಂದ ಮಾಹಿತಿ
ಎಚ್ಚರವಾಗಿರುವಂತೆ ಸಾರ್ವಜನಿಕರಿಗೆ ಸೂಚನೆ

ಭಟ್ಕಳ: ಸೈಬರ್ ವಂಚಕರು ಈ ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಮೂಲಕ ಜನರನ್ನು ವಂಚಿಸುವ ದಾರಿಗಳನ್ನು ಕಂಡುಕೊಂಡಿದ್ದು, ಮೋಸದಿಂದ ಗ್ರಾಹಕರಿಗೆ ಹಣ ದೋಚುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ.

ಹೌದು Phone pay App ಬಳಸುವ ಗ್ರಾಹಕರಲ್ಲಿ ಮುರುಡೇಶ್ವರ ಪೊಲೀಸ ಠಾಣೆ ಯಿಂದ ಎಚ್ಚರಿಕೆ ಮಾಹಿತಿ ನೀಡಿದ್ದು 6289474895 ಈ ಅನಾಮಧೇಯ ನಂಬರಿನಿಂದ ಕರೆ ಮಾಡಿ ನಾನು Phone pay ಗ್ರಾಹಕರ ಸೇವಾ ಕೇಂದ್ರದಿಂದ ಮಾತನಾಡುತ್ತಿರುವುದು, ನಮ್ಮ ಎಲ್ಲಾ Phone pay ಗ್ರಾಹಕರಿಗೆ covid-19 ವಿಮಾ ಕೇಂದ್ರದಿಂದ 5000 ರೂಪಾಯಿ ಸಿಗುತ್ತಿದ್ದು, ಆ ಹಣವನ್ನು ಪಡೆದುಕೊಳ್ಳಲು ನಾವು ನಿಮಗೆ To-pay ಎನ್ನುವ ಲಿಂಕನ್ನು ಕಳುಹಿಸುತ್ತೇವೆ ಎಂದು ಆ ಲಿಂಕನ್ನು ಕಳುಹಿಸಲಾಗುತ್ತದೆ. ಒಂದು ವೇಳೆ ಅವರು ಕಳುಹಿಸಿದ To-pay ಲಿಂಕನ್ನು ತೆರೆದರೆ ಕೂಡಲೇ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಡ್ರಾ ಆಗುತ್ತದೆ.

ಆದ್ದರಿಂದ 6289474895 ನಂಬರಿನಿಂದ ಕರೆ ಬಂದರೆ ಸ್ವೀಕರಿಸಬಾರದೆಂದು ಮುರುಡೇಶ್ವರ ಪೊಲೀಸ್ ಠಾಣೆ, ಪಿ,ಎಸ್,ಐ.ಸಿ.ಆರ್ ಪುಟ್ಟಸ್ವಾಮಿ ಸರ‍್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button