Big News
Trending

ಮಗುವಿಗೆ ಮರುಜೀವ ನೀಡಿದ ವೈದ್ಯರು

  • 1.5 ಕೆ.ಜಿ ತೂಕವಿತ್ತು ಮಗು
  • ನ್ಯೂಮೋನಿಯಾ, ಹೃದಯ ಸಂಬಂಧಿ ಖಾಯಿಲೆ
  • ವೈದ್ಯರಿಂದ ನಿರಂತರ 12 ದಿನಗಳ ಚಿಕಿತ್ಸೆ

ಶಿರಸಿ: ಈ ಮಗು ಹುಟ್ಟಿದಾಗ ಕೇವಲ 1.5 ಕೆ.ಜಿ ತೂಕ ಇತ್ತು. ಅಲ್ಲದೆ, ನ್ಯೂಮೋನಿಯಾ ಹಾಗೂ ಹೃದಯ ಸಂಬoಧಿ ಸಮಸ್ಯೆದಿಂದ ಬಳಲುತ್ತಿತ್ತು. ಮಗುವಿನ ಅವಸ್ಥೆಯನ್ನು ಕಂಡು ಪಾಲಕರು ಮರುಗಿದ್ದರು. ಆದರೆ, ಶಿರಸಿ ಪಂಡಿತ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯ 12 ದಿನಗಳ ನಿರಂತರ ಚಿಕಿತ್ಸೆ ಹಾಗೂ ಆರೈಕೆಯಿಂದ ಮಗುವಿಗೆ ಮರುಜೀವ ನೀಡಿದ್ದಾರೆ. ಇದರಿಂದಾಗಿ ಇಲ್ಲಿನ ಕಾವಲಕೊಪ್ಪದ 39 ವರ್ಷದ ಮಹಿಳೆ ಮತ್ತು ಆಕೆಯ ಕುಟುಂಬದಲ್ಲಿ ಸಂತಸ ಮೂಡಿದೆ.

12 ದಿನಗಳ ನಿರಂತರ ಪ್ರಯತ್ನದ ಪರಿಣಾಮ ಈಗ ಮಗು ಚೇತರಿಸಿಕೊಂಡಿದೆ. ವೈದ್ಯರಾದ ಮಕ್ಕಳ ತಜ್ಞ ಆರ್ಶಿತ ಭಟ್ಟ, ಆಸ್ಪತ್ರೆ ವೈದ್ಯಾಧಿಕಾರಿ ಗಜಾನನ ಭಟ್ಟ ಹಾಗೂ ಸಿಬ್ಬಂದಿ ಚಿಕಿತ್ಸೆ ನೋಡಿಕೊಂಡಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button