ಮಾಹಿತಿ
Trending

ಶಿರಸಿಯ ಸುಧೀರ ಹೆಗಡೆಗೆ ‘ಉತ್ತಮ ತನಿಖಾ ರಾಷ್ಟ್ರೀಯ ಪದಕ’

ಶಿರಸಿ: ಬೆಂಗಳೂರಿನ ಮೈಕೋ ಲೇಔಟ್ ಎಸಿಪಿ ಯಾಗಿರುವ ಶಿರಸಿ ಮೂಲದ ಸುಧೀರ ಹೆಗಡೆ ಕೇಂದ್ರ ಗೃಹ ಇಲಾಖೆ ನೀಡುವ ‘ಭಾರತದ ಉತ್ತಮ ತನಿಖಾ ರಾಷ್ಟ್ರೀಯ ಪದಕ’ ದ ಗೌರವ ಸಂದಿದೆ.
ನಿಷ್ಠಾವಂತ, ದಿಟ್ಟ ಅಧಿಕಾರಿಯೆಂದು ಗುರುತಿಸಿಕೊಂಡ ಸುಧೀರ 1999 ರಲ್ಲಿ ಗುಲ್ಬರ್ಗಾದಲ್ಲಿ ಉತ್ತಮ ಪಿಎಸ್‍ಐ, 2001ರಲ್ಲಿ ಮುಖ್ಯಮಂತ್ರಿ ಪದಕ, 2002 ರಲ್ಲಿ ಅಖಿಲ ಭಾರತೀಯ ಪೊಲೀಸ್ ಪದಕ, 2017 ರಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದರು.

ರಾಜ್ಯದ ವಿವಿಧೆಡೆ ವಿವಿಧ ಹುದ್ದೆಯಲ್ಲಿ ಸೇವೆ ಸಲಲಿಸಿದ ಇವರು, ಈಗಾಗಲೇ 40 ಕ್ಕೂ ಅಧಿಕ ಗಂಭೀರ ಪ್ರಕರಣ ಬೇಧಿಸಿದ್ದಾರೆ. ಶೃಂಗೇರಿಯಲ್ಲಿ ನಡೆದು ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದ್ದ ಸ್ವಾತಿ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಿದ್ದಕ್ಕೆ ಕೇಂದ್ರ ಗೃಹ ಸಚಿವಾಲಯ ಈ ಬಾರಿಯ ಉತ್ತಮ ತನಿಖಾ ಪ್ರಶಸ್ತಿ ಘೋಷಿಸಿದೆ.

ವಿಸ್ಮಯ ನ್ಯೂಸ್ ಶಿರಸಿ

Back to top button