Big News

ಸಾಧನಾಳ ಸಾಧನೆ ಎಲ್ಲರಿಗೂ ಪ್ರೇರಣೆ

ಕುಮಟಾ: ಕರೊನಾ ಮಹಾಮಾರಿ ಎಲ್ಲಡೆ ಆವರಿಸುತ್ತಿದ್ದು, ಇಡೀ ದೇಶವೇ ತತ್ತರಿಸಿಹೋಗಿದೆ. ಪ್ರಮುಖವಾಗಿ ಹೊರರಾಜ್ಯಕ್ಕೆ ತೆರಳಿ ಜೀವನ ರೂಪಿಸಿಕೊಂಡವರು, ಅಲ್ಲೇ ಇದ್ದು ಜೀವನ ನಡೆಸುತ್ತಿರುವವರು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‍ಡೌನ್‍ನಿಂದಾಗಿ ತವರಿಗೂ ಮರಳಲಾಗದೆ, ಅಲ್ಲೂ ಇರಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ತವರಿಗೆ ಮರಳು ಸಾಧ್ಯವೇ ಇಲ್ಲ. ಅಲ್ಲದೆ ಇದ್ದು ಜೀವನ ನಡೆಸೋಣವೆಂದ್ರೆ, ಹೊಟ್ಟೆಗೆ ಏನು ಮಾಡೋಣ ಎಂಬ ಚಿಂತೆ ಅವರನ್ನು ಕಾಡುತ್ತಿದೆ.. ಕಳೆದ ಒಂದು ತಿಂಗಳಿನಿಂದ ಲಾಕ್‍ಡೌನ್ ಬೇಗುದಿಗೆ ಸಿಲುಕಿ, ಕಂಗಾಲಾಗಿದ್ದಾರೆ ದೂರದ ಗುಜರಾತ್‍ನ ಸೂರತ್‍ನಲ್ಲಿರುವ ಕನ್ನಡಿಗರು.. ಜೀವನೋಪಾಯಕ್ಕಾಗಿ ಸೂರತ್‍ನಲ್ಲಿ ಅತಿಹೆಚ್ಚು ಕನ್ನಡಿಗರು ನೆಲೆ ಕಂಡುಕೊಂಡಿದ್ದಾರೆ.. ಈಗ ಇಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ಬಾಳಲ್ಲಿ ಆಶಾಕಿರಣವಾಗಿ ಬಂದವರು, ನಮ್ಮ ಉತ್ತರಕನ್ನಡ ಕುಮಟಾ ತಾಲೂಕಿನ ಸಾಧನಾ ರಾವ್ ಅವರು.. ಹೌದು,. ಸಾಧನಾ ರಾವ್ ಅವರು, ಲಾಕ್‍ಡೌನ್ ಬೇಗುದಿಗೆ ಸಿಲುಕಿ ಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ.. ಅಲ್ಲಿರುವ ಕನ್ನಡಿಗರ ಮನೆ ಮನೆ ಹುಡುಕಿ, ದಿನಸಿ ಕಿಟ್ ಪೂರೈಸುತ್ತಾ, ನೊಂದ ಜೀವಕ್ಕೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲದೆ, ಊಟವನ್ನು ತಯಾರಿ ಮಾಡಿ, ನೀಡುತ್ತಿದ್ದಾರೆ..
ಇಲ್ಲಿನ ಕನ್ನಡಿಗರು ತುಂಬಾ ಕಷ್ಟದಲ್ಲಿದ್ದಾರೆ. ಹೀಗಾಗಿ ನನ್ನಿಂದಾಗುವ ಸಹಾಯ ಮಾಡುತ್ತಿದ್ದು, ಕೈಲಾದಷ್ಟು ನೆರವು ನೀಡುತ್ತಿದ್ದಾರೆ.. ಇವರೆಲ್ಲ ಪರಿಸ್ಥಿತಿ ನೋಡಿದ್ರೆ ತುಂಬಾನೇ ಬೇರವಾಗುತ್ತದೆ ಎಂದು ವಿಸ್ಮಯ ಟಿ.ವಿಯೊಂದಿಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ನಮ್ಮ ಕನ್ನಡಿಗರು ಬೇರೆ ಸಮಾಜದ ಜನರ ಮುಂದೆ ಹೋಗಿ ಕೈಚಾವುದುನ್ನು ನೋಡಿದ್ರೆ ಬೇಸರವಾಗುತ್ತದೆ. ಹೀಗಾಗಿ ನಾವು ಕೈಲಾದ ಸಹಾಯ ಮಾಡಲು ನಿರ್ಧರಿಸಿದ್ದೇನೆ. ನಾವು ಹೋಗಿ ಕನ್ನಡಿಗರನ್ನು ಹುಡಕಿ, ಅವರ ಮನೆಗೆ ತೆರಳಿ, ಪರಿಸ್ಥಿತಿಯನ್ನು ಅವಲೋಕಿಸಿ, ಸಹಾಯ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು..
ಸಾಧನಾ ರಾವ್ ಅವರು ಸೂರತ್‍ನಲ್ಲಿ ಆಂಗ್ಲ ಮಾಧ್ಯಮ ಶಾಲೆಯೊಂದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು.. ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ.. ಸರ್ಕಾರ ಈ ಬಗ್ಗೆ ಯೋಚಿಸಿ, ಹೊರರಾಜ್ಯಗಳಲ್ಲಿರುವ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ..
ಸೂರತ್‍ಗೆ ತೆರಳಿ, ಕೆಲಸ ಮಾಡುತ್ತಿರುವವ ಬಹುತೇಕರಿಗೆ ಪಡಿತರ ಚೀಟಿಯಿಲ್ಲ. ಹೀಗಾಗಿ ಇಲ್ಲಿನವರು ಸರ್ಕಾರದ ಸೌಲತ್ತುಗಳಿಂದ ವಂಚಿತರಾಗಿದ್ದಾರೆ.. ಇಂಥ ಕಷ್ಟಕ್ಕೆ ಸ್ಪಂದಿಸುತ್ತಿರುವ ಸಾಧನಾ ರಾವ್ ಅವರ ಕಾರ್ಯವೈಖರಿ ನಿಜಕ್ಕೂ ಮಾದರಿ..

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button