ವಿಸ್ಮಯ ಜಗತ್ತು
Trending

ಪರಶಿವನ ಆತ್ಮಲಿಂಗ ಸ್ಥಾಪಿಸಿ ಗೋಕರ್ಣದಲ್ಲಿ ನೆಲೆ

ವಟುರೂಪಿಯಾಗಿ ಇಷ್ಟಾರ್ಥ ಸಿದ್ಧಿಸುತ್ತಿರುವ ದ್ವಿಭುಜ ಗಣಪ

ಗೋಕರ್ಣ: ಗೋಕರ್ಣದ ಮಹಾಗಣಪತಿ, ಅತ್ಯಂತ ಪುರಾತನ ಸ್ವಯಂಭೂ ಗಣಪತಿ.. ಹೌದು, ಪರಶಿವನ ಆತ್ಮಲಿಂಗವನ್ನ ಗೋಕರ್ಣದಲ್ಲಿ ಸ್ವತ: ಸ್ಥಾಪಿಸಿ ವಟುರೂಪಿ ಗಣಪತಿಯು, ದಿವ್ಯವಾದ ಆತ್ಮಲಿಂಗದ ಆಗ್ನೇಯಕ್ಕೆ ಮೂವತ್ತೆರಡು ಅಡಿ ದೂರದಲ್ಲಿ ಪಶ್ವಿಮಾಭಿಮುಖವಾಗಿ ಅದೇ ರೂಪದಲ್ಲಿ ನಿಂತಿದ್ದಾನೆ. ಈ ಗಣಪತಿ ಮೂರ್ತಿ ಭಕ್ತರ ಮನದಲ್ಲಿ ಭಕ್ತಿಭಾವಗಳ ಸಂಚಲನ ಉಂಟು ಮಾಡುತ್ತದೆ.
ಆತ್ಮಲಿಂಗ ಸ್ಥಾಪನೆಯ ಮಹಾಕಾರ್ಯದಿಂದ ಗೋಕರ್ಣ ಮಹಾಗಣಪತಿ ಆದಿಪೂಜ್ಯನಾದನು.. ಒಂದು ಕೈಯಲ್ಲಿ ಮೊದಕ ಪಾತ್ರೆ, ಮತ್ತೊಂದು ಕೈಯಲ್ಲಿ ಕಮಲದ ಹೂವು. ವಟು ಸ್ವರೂಪಿಯಾಗಿ ಇಲ್ಲಿ ನೆಲೆನಿಂತಿ, ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿದ್ದಾನೆ ಗೋಕರ್ಣದ ಮಹಾಗಣಪತಿ. ತಲೆಯ ಮೇಲೆ ಹೊಂಡವಿದ್ದು, ರಾವಣ ಗುದ್ದಿದ್ದರಿಂದ ಹೀಗಾಗಿದೆ. ಈಗಲೂ ಆ ಹೊಂಡವನ್ನ ಕಾಣಬಹುದು. ಅಲ್ಲದೆ, ಇಲ್ಲಿನ ಗಣಪತಿಗೆ ವಿಶೇಷ ಶಕ್ತಿ ಇದೆ ಎಂದು ರಾಮಕೃಷ್ಣ ಶಂಕರಲಿAಗ ಹೇಳಿದರು.
ಒಟ್ನಲ್ಲಿ ಗೋಕರ್ಣದಲ್ಲಿ ನೆಲೆನಿಂತ ದ್ವಿಭುಜ ಗಣಪತಿ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಾ, ವಿಘ್ನನಿವಾರಕನಾಗಿ ಖ್ಯಾತಿ ಗಳಿಸಿದ್ದಾನೆ.

ವಿಸ್ಮಯ ನ್ಯೂಸ್, ಗೋಕರ್ಣ

Related Articles

Back to top button