Uttara Kannada
Trending

ಸಂಕ ದಾಟುವಾಗ ಕಾಲುಜಾರಿ ಬಿದ್ದ ವ್ಯಕ್ತಿ ಸಾವು

ಭಟ್ಕಳ: ಮನೆಯಿಂದ ಕೂಲಿ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೊರ್ವ ಹಳ್ಳದ ಸಂಕ ದಾಟುವಾಗ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಶಿರಾಲಿಯ ಹೆಗಡೆ ಗ್ಯಾರೆಜ್ ಬಳಿ ನಡೆದಿದೆ. ಶಿರಾಲಿಯ ಕೋಟೆಬಾಗಿಲು ನಿವಾಸಿ ಶಿವರಾಮ ಮಂಜಪ್ಪ ನಾಯ್ಕ(41) ಮೃತ ವ್ಯಕ್ತಿ. ಇವರು ಬೆಳಗಿನ ಜಾವ ಮನೆಯಿಂದ ಕೂಲಿಕೆಲಸಕ್ಕೆ ತೆರಳಿದ್ದರು. ಶಿರಾಲಿಯ ಹೆಗಡೆ ಗ್ಯಾರೆಜ್ ಬಳಿ ಹಳ್ಳದ ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿಮೃತಪಟ್ಟಿದ್ದಾರೆ.

ಈ ಕುರಿತು ಮಂಜುನಾಥ ನಾಗಪ್ಪ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button