Important
Trending

ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ ಕಾರು

ಸಿದ್ದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಗದ್ದೆಗೆ ಬಿದ್ದು ಪಲ್ಟಿಯಾದ ಘಟನೆ ತ್ಯಾರ್ಸಿ ಬಳಿ ನಡೆದಿದೆ. ಸಿದ್ದಾಪುರ ಕುಮಟಾ ಮುಖ್ಯ ರಸ್ತೆಯ ತ್ಯಾರ್ಸಿ ಬಳಿ ಈ ಘಟನೆ ಸಂಭವಹಿಸಿದ್ದು , ಅದೃಷ್ಟವಶಾತ್ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕಾರು ಪಲ್ಟಿಯಾಗಿರುವುದನ್ನ ಗಮನಿಸಿದ ಸ್ಥಳೀಯರು ವಾಹನ ಮೇಲಕ್ಕೆತ್ತಲು ಸಹಕಾರ ನೀಡಿದ್ದಾರೆ. ವಾಹನದ ಬಿಡಿ ಭಾಗಗಳಿಗೆ ಹಾನಿಯಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button