Follow Us On

WhatsApp Group
Important
Trending

ಚಿನ್ನಾಭರಣವಿದ್ದ ಬ್ಯಾಗ್ ಕಳೆದುಕೊಂಡ ಮಹಿಳೆ: ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕರು

ಶಿರಸಿ: ಬಸ್ಸಿನಲ್ಲಿ ಮಹಿಳೆ ಬ್ಯಾಗ್ ಬಿಟ್ಟು ಹೋಗಿದ್ದರು. ಈ ಬ್ಯಾಗಿನಲ್ಲಿ ಬೆಲೆಬಾಳುವ ಚಿನ್ನಾಭರಣ ಮತ್ತು ಹಣವೂ ಇದ್ದು, ಬ್ಯಾಗ್ ನಾಪತ್ತೆಯಾಗಿದ್ದರಿಂದ ಮಹಿಳೆ ಆತಂಕಗೊoಡಿದ್ದಳು. ಬಸ್ ನಲ್ಲಿ ಬ್ಯಾಗ್ ಗಮನಿಸಿದ ಚಾಲಕ, ನಿರ್ವಾಹಕರು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರದಿದ್ದಾರೆ.

ಹೌದು, ಶಿರಸಿ ಗೋಳಿಮಕ್ಕಿ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಬಿಟ್ಟು ಹೋಗಿದ್ದ ಮಹಿಳೆಗೆ ವಾಪಸ್ ಬ್ಯಾಗ್ ತಲುಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಬಸ್ ನಿರ್ವಾಹಕ ರವೀಂದ್ರ ದೊಡ್ಮನೆ ಮತ್ತು ಚಾಲಕ ವೈ.ಎಂ.ಬಿರಾದಾರ ಈ ಪ್ರಾಮಾಣಿಕತೆ ಮೆರೆದ ಸಿಬ್ಬಂದಿಳಾಗಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button