ಹೊನ್ನಾವರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಪಲ್ಟಿಯಾಗಿ ಗಟಾರದಲ್ಲಿ ಬಿದ್ದ ಘಟನೆ ತಾಲೂಕಿನ ಇಕೋ ಬೀಚ್ ಸಮೀಪ ನಡೆದಿದೆ. ಕಾರಿನಲ್ಲಿದ್ದರು ಬೆಂಗಳೂರು ಮೂಲದ ವಿದ್ಯಾರ್ಥಿಗಳಾಗಿದ್ದು, ಪ್ರವಾಸಕ್ಕೆಂದು ಆಗಮಿಸಿದ್ದರು. ಕಾರು ಚಾಲಕನ ಅಜಾಗರುಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಆದಿತ್ಯ, ಶಿಲ್ಪ, ಆಕಾಶ,ತರುಣ, ರೊಹೇಬ್, ಖುಷಿ, ಪವನಕುಮಾರ, ಯಶವಂತ ನಾಯ್ಡು, ಮೈಸುರು ಮೂಲದ ಪ್ರೀಯಾಂಕ ಗಾಯಗೊಂಡವರಾಗಿದ್ದಾರೆ.
ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಕರೆದೊಯ್ಯಲಾಗಿದೆ. ಚಾಲಕ ಯಶವಂತ ನಾಯ್ಡು ವಿರುದ್ಧ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ